ಚಿತ್ರದುರ್ಗ:ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯ ಅವರಿಗೆ ಕೆಟ್ಟ ಮೇಲೆ ಬುದ್ದಿ ಬಂದಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಮಾಡಿದ್ದನ್ನು ಮರೆತಿದ್ದಾರೆ. ಅವರ ಅಧಿಕಾರಾವಧಿ ಭ್ರಷ್ಟಾಚಾರ ತಾಂಡವವಾಡಿತ್ತು.
ಪತಿ ಘನತಗೆ ಚ್ಯುತಿ ಬರಬಾರದೆಂದು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಸೈಟ್‌ಗಳನ್ನು ಹಿಂದಿರುಗಿಸಿದ್ದಾರೆ. ಅವರ ಭಾವನೆಗೆ ಬೆಲೆ ಕೊ ಡುವ ಕೆಲಸ ಕಾಂಗ್ರೆಸ್ ನಾಯಕರು ಮಾಡುತ್ತಿದ್ದೇವೆ. ಸೈಟ್ ವಾಪಸ್ ಕೊಟ್ಟಿರುವುದು ಅವರ ತ್ಯಾಗ ಮನೋಭಾವವನ್ನು ತೋರಿಸುತ್ತೆ.
ಸತ್ಯವನ್ನು ಯಾವತ್ತೂ ಮರೆಮಾಚಲು ಆಗಲ್ಲ.ಆಸ್ತಿ ಬೇಡವೆಂದು ಪಾರ್ವತಿಯವರೇ ಹೇಳಿದ್ದಾರೆ.
ಮೂಡಾ ಕೇಸಲ್ಲಿ ಸಿದ್ದರಾಮಯ್ಯಗೆ ಏನೂ ಆಗಲ್ಲ.ಬಿಜೆಪಿಯವರು ನಿತ್ಯವೂ ಅಸತ್ಯವನ್ನು ಮಾತನಾಡುತ್ತಿದ್ದು,ಸತ್ಯ ಅಸತ್ಯವನ್ನು ಹೊಡೆದು ಹಾ ಕುತ್ತೆ. ಬಿಜೆಪಿಯವರು ಇಷ್ಟೆಲ್ಲ ಆಸ್ತಿ ಹೊಡೆದ್ರಲ್ಲ,ವಾಪಸ್ ಕೊಟ್ಟಿದ್ದಾರೆಯೇ? ಜೈಲಿಗೂ ಹೋದ್ರಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂ ರಪ್ಪರನ್ನು ಪರೋಕ್ಷವಾಗಿ ಸಚಿವರು ಟೀಕಿಸಿದರು.
ದಸರಾ ಒಳಗೆ ಸಿಎಂ ರಾಜೀನಾಮೆ ನೀಡುತ್ತಾರೆ,ಅರೆಸ್ಟ್ ಆಗುತ್ತಾರೆಂದು ಬಿಜೆಪಿ ನಾಯಕರ ತಿರುಕನ ಕನಸು ಕಾಣುತ್ತಿದ್ದಾರೆ. ಮುಡಾದಲ್ಲಿ 4 ಸಾವಿರ ಸೈಟ್ ಅಕ್ರಮ ವರ್ಗಾವಣೆ ಕುರಿತಂತೆ ತನಿಖೆ ನಡೆದು ಸತ್ಯ ಹೊರಬರಲಿ. ಕಾಂಗ್ರೆಸ್ಸಿನಲ್ಲಿ ದಲಿತ,ಮೈನಾರಿಟಿ, ಜನರಲ್ ಎಲ್ಲ ಒಂದೇ ಎಂದರು.