ಸಚಿವ ಗೋವಿಂದ ಕಾರಜೋಳ  
ಜಿಲ್ಲೆ

ಮೊಸರಲ್ಲಿ ಕಲ್ಲು ಹುಡಕಬೇಡಿ

ಬಾಗಲಕೋಟೆ: ಸಿದ್ದರಾಮಯ್ಯ- ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು ಸಾಧನೆ ಬಗ್ಗೆ ಹೇಳಬೇಕು. ಜನ ನಿಮ್ಮನ್ನು ಎಷ್ಟು ಹೀನಾಯವಾಗಿ ತಿರಸ್ಕರಿಸಿದ್ದರೆ ತಿಳಿಸಿ. ಜನ ನಮ್ಮನ್ನು ನಂಬಿದ್ದರಿಂದಲೇ ನಾವು ನಂ.೧ ಆಗಿದ್ದೇವೆ. ನಾವು ಮಾಡಿದ ಸ್ವಲ್ಪ ತಪ್ಪಿನಿಂದ ೮-೧೦ ಸ್ಥಾನ ಕಡಿಮೆ ಆಯಿತು. ಇಲ್ಲವಾದಲ್ಲಿ ೧೨೦ ಸ್ಥಾನ ದಾಟುತ್ತಿದ್ದೇವು. ರಾಹುಲ್ ಬಾಬಾನ ಕರ್ಕೊಂಡು ಕಾಂಗ್ರೆಸ್‌ನವರು ತಿರುಗುತ್ತಿದ್ದಾರೆ. ಯಾಕೇ ನಿಮಗೆ ಮುಖ ಇಲ್ವಾ? ಅಂತ ಸಚಿವ ಗೋವಿಂದ ಕಾರಜೋಳ ಟೀಕಿಸಿದರು.

ಪುಕ್ಕಟ್ಟೆ ಯೋಜನೆಗಳಿಗೆ ೫ ಲಕ್ಷ ಕೋಟಿ ರೂ.ಬೇಕಾಗುತ್ತದೆ. ರಾಜ್ಯದ ಮೇಲೆ ಸಾಲದ ಹೊರೆ ಇದೆ. ರಾಜ್ಯದ ಬಜೆಟ್ ಇರೋದೆ ೨ ಲಕ್ಷ ಕೋಟಿ ರೂ. ಆದರೆ ೫ ಲಕ್ಷ ಕೋಟಿ ಕೊಡ್ತಾರಾ?. ಇವರು ಸುಳ್ಳು ಹೇಳಿದ ಕಡೆ ಆತ್ಮಹತ್ಯೆ ಪರಿಸ್ಥಿತಿಯಿದೆ. ರಾಜಸ್ತಾನದ ಪರಿಸ್ಥಿತಿ ಪಾಕಿಸ್ತಾನ ಆಗಿದೆ. ಕಾಂಗ್ರೆಸ್ ೨೦೦ ಯುನಿಟ್ ವಿದ್ಯುತ್, ಹೆಣ್ಣುಮಕ್ಕಳ ಖಾತೆಗೆ ೨ ಸಾವಿರ ಹಾಕುತ್ತೇವೆ ಅಂತಾರೆ. ಬಜೆಟ್ ಎಷ್ಟೋ ಬಾಬಾ ನಿಮ್ಮದು. ಅಬ್ಬಬ್ಬಾ ಎಂದರೆ ಎರಡುವರೆ ಲಕ್ಷ ಕೋಟಿ. ನೀವು ಉಚಿತ ಭರವಸೆ ಕೊಟ್ಟಿರಲ್ಲ. ಅದಕ್ಕೆ ಐದು ಲಕ್ಷ ಕೋಟಿ ಬಜೆಟ್ ಬೇಕಾಗುತ್ತದೆ.ಹಾಗಾದರೆ ಸರ್ಕಾರ ನಡೆಸುತ್ತಿರೊ ಇಲ್ಲೋ? ನೌಕರರಿಗೆ ಪಗಾರ ಕೊಡುತ್ತಿರೋ ಇಲ್ಲೋ? ರಾಜ್ಯದ ಸಾಲದ ಹೊರೆ ತೀರಿಸ್ತಿರೊ ಇಲ್ಲೋ? ಬಡ್ಡಿ ಹಾಗೂ ಅಸಲು ಕೊಡ್ತಿರೋ ಇಲ್ಲೋ? ಹಾಗಾದ್ರೆ ನಿಮ್ಮ ಬಜೆಟ್ ಎಷ್ಟು ಹೇಳಿ ಅಂತ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.