ಬಾಗಲಕೋಟೆ: ನವನಗರದ ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಕಾಲೇಜಿನ ೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ೯೭.೧೮ ರಷ್ಟು ಉತ್ತಮ ಫಲಿತಾಂಶ ಲಭಿಸಿದೆ.
ಪಾರ್ವತಿ ಮನಿನಾಗರ ಶೇ.೯೭.೬೬ ರಷ್ಟು ಅಂಕ ಪಡೆಯುವ ಮೂಲಕ (ಪ್ರಥಮ) ಸ್ಥಾನ ಪಡೆದರೆ, ಕಸ್ತೂರಿ ಇರಪ್ಪನ್ನವರ ಶೇ.೯೭ ರಷ್ಟು ಅಂಕ ಪಡೆದು (ದ್ವಿತೀಯ) ಹಾಗೂ ಅರ್ಚನಾ ಪೂಜಾರಿ ಶೇ.೯೬.೫ ರಷ್ಟು ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ೭೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ೨೪, ಉತ್ತಮ ಶ್ರೇಣಿಯಲ್ಲಿ ೪೩ ಮತ್ತು ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಅಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.