ಚಿತ್ರದುರ್ಗ: ಮೊಬೈಲ್ ಬಳಕೆ ಕಡಿಮೆ ಮಾಡಿ, ವಿದ್ಯಾಭ್ಯಾಸ, ಆಟೋಟಗಳೆಡೆ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ. ರಘುಚಂದನ್ ಹೇಳಿದರು.
ನಗರದ ಇಂಡಿಯನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಡೆಸ್ಟಿನಿ-2024ರ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಹಾಡು, ಆಟ ಆಡು ‘ಚಿಣ್ಣರ ಜುಗಲ್‌ಬಂದಿ’ ಶಾಲಾ ಹಂತದ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ಕೊಡಬೇಕು. ಮೊಬೈಲ್‌ನಿಂದ ದೂರವಿರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಸಿ. ಅನಂತರಾಮ ಮಾತನಾಡಿ, ಓದುವ ಸಮಯದಲ್ಲಿ ಓದಿ, ಆಟವಾಡುವ ಸಮಯದಲ್ಲಿ ಆಟವಾಡಿ ಖುಷಿಪಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆ ಆಡಳಿತಾಧಿಕಾರಿ ಎಚ್. ಚಂದ್ರಕಲಾ, ಡಾ.ಎಂ. ಚಂದ್ರಪ್ಪ, ಎಸ್‌ಎಲ್‌ವಿ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಎಂ.ಎಂ. ಮಹಾಂತೇಶ, ಎಸ್‌ಎಲ್‌ವಿಪಿ ಕಾಲೇಜು ಪ್ರಾಚಾರ್ಯ ಕೇಶವಮೂರ್ತಿ, ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್ ಸಿಬಿಎಸ್‌ಇ ಪ್ರಾಚಾರ್ಯ ಆಂಥೋನಿ ಮ್ಯಾಥ್ಯೂ, ಸ್ಟೇಟ್ ಸ್ಕೂಲ್ ಮುಖ್ಯಶಿಕ್ಷಕ ಆರ್.ಸಿ. ತಿಪ್ಪೇಸ್ವಾಮಿ ಮತ್ತಿತರರು ಇದ್ದರು.