ಜಿಲ್ಲೆ

ಮೊಬೈಲ್‌ನಿಂದಾಗಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ವಿದ್ಯಾರ್ಥಿ,ನಾಗರಿಕರಲ್ಲಿ ಓದುವ ಅಭಿರುಚಿ ಉಳಿಸಿ-ಬೆಳೆಸಲು ರಾಜ್ಯಸರ್ಕಾರ ನಾನಾ ಕಾರ‌್ಯಕ್ರಮಗಳನ್ನು ರೂಪಿಸಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.
ಜಿಪಂದಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಸ್ನೇಹಿ ಗ್ರಂಥಾಲಯದ ತರಬೇತಿ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಹಾವಳಿಯಿಂದಾಗಿ ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೂ ಸರ್ಕಾ ರಗಳು ಜನರಲ್ಲಿ ಓದುವ ಹವ್ಯಾಸ ವನ್ನು ಬೆಳೆಸಲು ಗ್ರಂಥಾಲಯಗಳ ಅಭಿವೃದ್ಧಿಗೆ ಒತ್ತು ನೀಡಿವೆ.
ಸೆ.15ರಿಂದ ಅಕ್ಟೋಬರ್ 2ರವರೆಗೆ ವಿಶೇಷ ಆಂದೋಲನದ ಮೂಲಕ ಜಿಲ್ಲೆಯ ಎಲ್ಲ ಗ್ರಾಪಂ ಗ್ರಂಥಾಲಯದ ಸುತ್ತಮುತ್ತಲಿನ ಪ್ರ ದೇಶದಲ್ಲಿ ಸ್ವಚ್ಛತೆ ಅರಿವು ಮೂಡಿಸಿ,ಶ್ರಮದಾನ ಮಾಡುವಂತೆ ಗ್ರಂಥಾಲಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು. ಜಿಲ್ಲಾ ಮುಖ್ಯಗ್ರಂಥಾ ಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ,ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ರವಿ ಮತ್ತಿತರರು ಇದ್ದರು.