ಚಿತ್ರದುರ್ಗ: ನಗರದ ಕೋಟೆ ಆವರಣದಲ್ಲಿ ಪ್ರವಾಸಿಗರೊಬ್ಬರು ಕಳೆದುಕೊಂಡಿದ್ದ 38 ಸಾವಿರ ರೂ.ಮೌಲ್ಯದ ಮೊಬೈಲ್‌ನ್ನು ಕೋಟೆ ಮಾರ್ಗದರ್ಶಿಗಳ ತಂಡ ಹಿಂತಿರುಗಿಸಿದೆ. ಬೆಂಗಳೂರಿನ ಪತ್ರಕರ್ತ ಹರಿಪ್ರಸಾದ್ ಮತ್ತಿತರರು ಭಾನುವಾರ ಕೋಟೆ ನೋಡಲು ಬಂದಿದ್ದು,ಎಣ್ಣೆಕೊಳ ದ ಬಳಿ ಮೊಬೈಲ್‌ನ್ನು ಮರೆತು ಅಲ್ಲಿಂದ ತೆರಳಿದ್ದರು. ಕೆಲ ಸಮಯದ ನಂತರದಲ್ಲಿ ತಮಗೆ ಸಿಕ್ಕ ಮೊಬೈಲ್‌ನ್ನು ಕೂಡಲೇ ಮಾಹಿತಿ ನೀಡಿ ಗೈ ಡ್‌ಗಳು ಹಿಂತಿರುಗಿಸಿದ್ದಾರೆ. ಗೈಡ್‌ಗಳಾದ ಮೊಹಿದ್ದೀನ್‌ಖಾನ್,ಟಿ.ಬಸವರಾಜ್,ಆರ್.ಶಿವಣ್ಣ,ಪರಶುರಾಮ,ರಾಧಾಕೃಷ್ಣ,ಪ್ರಕಾಶ್ ಹಾಗೂ ಪುರಾತತ್ವ ಇಲಾಖೆ ಸಿಬ್ಬಂದಿ ಲೋಕೇಶ್ ಮತ್ತಿತರರು ಇದ್ದರು.