oplus_131074 
ಜಿಲ್ಲೆ

ಮೊಬೈಲ್ ಚಟ ಮಿದುಳಿಗೆ ಹಾನಿ

ಚಿತ್ರದುರ್ಗ: ಉತ್ತಮ ಚಟುವಟಿಕೆಗಳ ಮೂಲಕ ಮಿದುಳು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಆರೋಗ್ಯ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಸಂಯುಕ್ತಾಶ್ರಯದಲ್ಲಿ ಜಿಲ್ಲಾಸ್ಪತ್ರೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಿದುಳು ದಿನಾಚರಣೆಯಲ್ಲಿ ಮಾತನಾಡಿದರು.
ಹೃದಯ, ಕಿಡ್ನಿ ಮತ್ತು ದೈಹಿಕ ಕಾಯಿಲೆಗಳ ಕಾರ್ಯಕ್ರಮಗಳಂತೆ ಈಚೆಗೆ ಮಿದುಳು ಆರೋಗ್ಯ ಕಾರ್ಯಕ್ರಮವೂ ಆರೋಗ್ಯ ಇಲಾಖೆಯಲ್ಲಿ ಪ್ರಾರಂಭವಾಗಿದೆ. ಎಲ್ಲರೂ ಮಾನಸಿಕವಾಗಿ ಆರೋಗ್ಯವಾಗಿರುವುದು ಮುಖ್ಯವಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದೇವೆ. ಅವುಗಳಿಂದ ಹೊರಬಂದು ದೈಹಿಕ ವ್ಯಾಯಾಮ ಮನೋರಂಜನ ಕಾರ್ಯಕ್ರಮಗಳು ಮೊದಲಾದ ಉತ್ತಮ ಚಟುವಟಿಕೆಗಳ ಮೂಲಕ ಮಿದುಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಜತೆ ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮ ಪ್ರಾರಂಭವಾಗಿದೆ. ಮನುಷ್ಯನಿಗೆ ನಿತ್ಯದ ಕಾರ್ಯ ಚಟುವಟಿಕೆಗಳಿಗೆ ಮಿದುಳು ಆರೋಗ್ಯವೂ ಬಹು ಮುಖ್ಯ ಎಂದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ನರರೋಗ ತಜ್ಞ ಡಾ.ಆರ್.ಕಿರಣ್ ಗೌಡ ಮಾತನಾಡಿ, ಮಿದುಳು ಆರೋಗ್ಯ ಬಗ್ಗೆ ಜಾಗೃತಿ ವಹಿಸಬೇಕು. ಮೂರ್ಛೆ ರೋಗದಂತಹ ಕಾಯಿಲೆ ಮಿದುಳು ಸಂಬಂಧಿ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯ ಬೇಕು ಎಂದು ತಿಳಿಸಿದರು.
ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ರವೀಂದ್ರ, ನಾಗರಾಜ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಚಾಲನೆ ನೀಡಿದರು
ಎಬಿಆರ್‌ಕೆ ಸಮಾಲೋಚಕ ಡಾ.ಚಂದ್ರಶೇಖರ್ ರಾಜು, ಡಾ.ಪ್ರಮೋದ್‌ಭಟ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಲಿನಿಕಲ್ ಸೈಕಲಾಜಿಸ್ಟ್ ಶ್ರೀಧರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೈ.ತಿಪ್ಪೇಶ್, ಪ್ರವೀಣ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಸುನೀತಾ, ರಶ್ಮಿ ಮತ್ತಿತರರು ಇದ್ದರು.