ಚಿತ್ರದುರ್ಗ:ಸಾಮಾಜಿಕ ಪಿಡುಗು ಬಾಲ್ಯವಿವಾಹದ ಕಡಿವಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಶಿಕ್ಷಣ ಮೊದಲು ನಂತರ ಮದುವೆ ಮಾಡುವಂತೆ ಜನರಲ್ಲಿ ಒಗೃತಿ ಮೂಡಿಸಬೇಕಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ತಾಲೂಕು ಕೂನಬೇವು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಪಂಚಾಯತ್‌ರಾಜ್, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮ ಆರೋಗ್ಯ ಯೋಜನೆ ಕುರಿತ ಚುನಾಯಿತ ಪ್ರತಿನಿಧಿಗಳು ಹಾಗೂ ಸಮನ್ವಯ ಇಲಾಖೆಗಳ ಸಿಬ್ಬಂದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ಗ್ರಾಪಂ ಟಾಸ್ಕ್‌ಫೋರ್ಸ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆಗೆ ತರಬೇತಿಯಿಂದ ಸಾಧ್ಯವಾಗಲಿದೆ. ಗ್ರಾಪಂ ಸದಸ್ಯರು ಸಾರ್ವಜನಿಕ ಆರೋಗ್ಯ ಸಮಸ್ಯೆ ಬಗೆಹರಿಸಲು ಸಕ್ರಿಯವಾಗಲು ನೆರವಾಗಲಿದೆ ಎಂದರು.
ಐಸಿಡಿಎಸ್ ಮೇಲ್ವಿಚಾರಕರಾದ ವಾಸವಿ, ರೂಪಾ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಮಾತನಾಡಿದರು.
ಗ್ರಾಪಂ ಸದಸ್ಯರಾದ ನಿಂಗಮ್ಮ ಹುಣಸೆಕಟ್ಟೆ, ನಾರಾಯಣಸ್ವಾಮಿ, ಮಂಜಣ್ಣ, ಪವಿತ್ರಾ ಮಹಾಸ್ವಾಮಿ, ಕಾರ‌್ಯದರ್ಶಿ ಪ್ರಶಾಂತ, ಸಮುದಾಯ ಆರೋಗ್ಯಾಧಿಕಾರಿ ಭಾರತಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ನವೀನಲಕ್ಷಿ ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ನಾಗೇಶ್ ಇತರರಿದ್ದರು.