ಚಿತ್ರದುರ್ಗ: ನವರಾತ್ರಿಯ ಮೊದಲ ದಿನ ಭಾನುವಾರ ಶೈಲಾ ಪುತ್ರಿಯ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ಮಹೋತ್ಸವ ಇನ್ನಷ್ಟು ಕಳೆಗಟ್ಟಿದೆ.
ನಗರದೇವತೆ ಬರಗೇರಮ್ಮ ದೇವಿಗೆ ಮೆಕ್ಕೆಜೋಳ, ಸಾವಿರಾರು ಬಳೆ ಮತ್ತು ಮಣಿಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಇಡೀ ದೇಗುಲ ಆವರಣ ವಿದ್ಯುದ್ದೀಪಾಲಂಕಾರದಿಂದ ಜಗಮಗಿಸಿತು. ಬೆಳಗ್ಗೆ 5.30ರಿಂದ ರಾತ್ರಿ 8ರವರೆಗೂ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ, ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು.