ರಾಮನಗರ: ಹಿಜಾಬ್ ವಿವಾದದ ನಡುವೆಯೇ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆ ರ್ನಿವ್ನಿವಾಗಿ ನಡೆದಿದ್ದು, ಅಧಿಕಾರಿಗಳು ಮತ್ತು ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಪರೀಕ್ಷೆ ಮೊದಲ ದಿನ ಪ್ರಥಮ ಭಾಷೆ ಪ್ರಶ್ನೆಪತ್ರಿಕೆ ಇದ್ದು ಹಿಜಾಬ್ ವಿವಾದ ಆತಂಕ ಉಂಟು ಮಾಡಿತ್ತು. ಆದರೆ, ಸೋಮವಾರ ಯಾವುದೇ ಗೊಂದಲ ಸೃಷ್ಟಿಯಾಗದೆ 13,115 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 346 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯ ಒಟ್ಟು 59 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 13,461 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ 346 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಎಲ್ಲೆಡೆ ಸುರಕ್ಷಾ ಕ್ರಮ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಕಾರಣದಿಂದಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡುವ ಜತೆಗೆ, ಥರ್ಮಲ್ ಸ್ಕಾನರ್ ಮೂಲಕ ಪರೀಸಿ ಒಳಬಿಡಲಾಯಿತು. ಪ್ರತಿ ಕೊಠಡಿಯಲ್ಲಿ ಕೇವಲ 20 ವಿದ್ಯಾರ್ಥಿಗಳು ಪರೀೆ ಬರೆಯಲು ಆಸನ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಸೋಂಕಿನ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಬರೆಸಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2 ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿತ್ತು. ಲಭ್ಯ ಮಾಹಿತಿ ಪ್ರಕಾರ ಯಾವುದೇ ವಿದ್ಯಾರ್ಥಿಗೂ ಸೋಂಕು ಕಾಣಿಸಿಕೊಂಡಿಲ್ಲ.
ಪ್ರೀತಿಯ ಸ್ವಾಗತ: ಕರೊನಾ ನಡುವೆಯೇ ನಡೆದ ಮೊದಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸುವ ಕೆಲಸವನ್ನು ಶಾಲಾ ಸಿಬ್ಬಂದಿ ಮಾಡಿದರು. ಕೆಲವು ಕಡೆಗಳಲ್ಲಿ ಕೊಠಡಿಗಳನ್ನು ಸಿಂಗರಿಸಲಾಗಿತ್ತು. ಇನ್ನು ಕೆಲವು ಕಡೆ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿದರೆ ಮತ್ತೆ ಕೆಲವು ಕಡೆ ಸಿಹಿ ನೀಡಿ ಪರೀಕ್ಷೆಗೆ ಶುಭಕೋರಿದ್ದು ಕಂಡುಬಂತು.
ಮುಸ್ಲಿಂ ವಿದ್ಯಾರ್ಥಿಗಳ ಗೈರು: ಹಿಜಾಬ್ ವಿವಾದದ ನಡುವೆಯೇ ರಾಮನಗರ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಒಟ್ಟು 110 ವಿದ್ಯಾರ್ಥಿಗಳು ಪರೀೆಯಿಂದ ದೂರ ಉಳಿದಿದ್ದಾರೆ. ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ 876 ಬಾಲಕಿಯರು ಮತ್ತು 893 ಬಾಲಕರು ಸೇರಿ 1769 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀೆ ಬರೆಯಲು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 1659 ಮಂದಿ ಮಾತ್ರ ಪರೀೆ ಹಾಜರಾಗಿದ್ದಾರೆ. ಗೈರು ಹಾಜರಾದ 110 ವಿದ್ಯಾರ್ಥಿಗಳಲ್ಲಿ 54 ಬಾಲಕಿಯರಿದ್ದು, ಯಾವ ಕಾರಣಕ್ಕಾಗಿ ಪರೀೆಯಿಂದ ದೂರ ಉಳಿದಿದ್ದಾರೆ ಎನ್ನುವುದು ಇನ್ನಷ್ಟೇ ಖಾತ್ರಿ ಆಗಬೇಕಿದೆ
ಯಾವುದೇ ಗೊಂದಲವಿಲ್ಲದೆ ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. ಒಟ್ಟಾರೆ 13115 ಮಂದಿ ಪರೀಕ್ಷೆ ಹಾಜರಾಗಿದ್ದಾರೆ. ಸೋಮಲಿಂಗಯ್ಯ, ಶಿಕ್ಷಣಾಧಿಕಾರಿ, ರಾಮನಗರ