ಯಾದಗಿರಿ: ಜಿ¯್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅಲ್ಲದೆ ಕೆಲ ಮಹತ್ವದ ಯೋಜನೆ ಜಾರಿ ಮಾಡುವ ನಿಟ್ಟಿನಲ್ಲಿ ಗಿರಿಜಿ¯್ಲÉ ಪ್ರತಿನಿಧಿಸುವ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಅವರ ಮೇಲೆ ಗುರುತರ ಹೊಣೆಗಾರಿಕೆ ಇದೆ.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಮೊದಲ ಸಲ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ (ದಿಶಾ) ಸಭೆ ಆಯೋಜಿಸಿರುವ ಸಂಸದ ನಾಯಕ್, ಅತಿ ಹೆಚ್ಚು ತಿಳಿವಳಿಕೆ, ಆಡಳಿತ e್ಞÁನ ಮತ್ತು ಕಾರ್ಯಾಂಗ ವ್ಯವಸ್ಥೆಯ ಒಳಹರಿವು ಆಳವಾಗಿ ಬಲ್ಲವರಾಗಿz್ದÁರೆ.
ಕಾರಣ, ಐಎಎಸ್ ಅಧಿಕಾರಿಯಾಗಿದ್ದ ಇವರು, ಹೆಚ್ಚು ಕಡಿಮೆ ೩೦ಕ್ಕೂ ಅಧಿಕ ವರ್ಷಗಳ ಸಮಯ ಜಿ¯್ಲÉಯಿಂದ ವಿಧಾನಸೌಧ ಮೊಗಸಾಲೆಯ ಬಹುತೇಕ ಇಲಾಖೆಗಳಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡಿz್ದÁರೆ. ಹೀಗಾಗಿ ಯೋಜನೆ ಹುಟ್ಟು, ಬೆಳವಣಿಕೆ, ಕಾರ್ಯಗತ, ಅಭಿವೃದ್ಧಿ ನೋಟ ಹೀಗೆ ಹಲವು ಆಯಾಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಳಗಿರುವ ಕುಮಾಕ ನಾಯಕ್ ಅವರು, ಜಿ¯್ಲÉಗೆ ಸಿಗಬೇಕಾದ ಅಗತ್ಯ ಸೌಲಭ್ಯ, ಹೊಸ, ಹೊಸ ಯೋಜನೆಗಳು ರಾಜ್ಯ, ಕೇಂದ್ರ ಸರ್ಕಾರಗಳ ನಡುವೆ ಸೇತುವೆಯಾಗಿ ಕೆಲಸ ಮಾಡಿದರೆ ಅವರಿಗೆ ಯಾವ ಕೆಲಸವೂ ಕಠಿಣವಲ್ಲ.
ಆದರೆ ಮನಸ್ಸು ಮಾಡಬೇಕು. ಸರ್ಕಾರಗಳು ಸೈ ಅನ್ನಬೇಕು. ಅಂದಾಗಲೆ ಗಿರಿಜಿ¯್ಲÉ ಇವರ ಅವಧಿಯ¯್ಲÉÆಂದಿಷ್ಟು ಅಭಿವೃದ್ಧಿ ಕಾಣಬಹುದೆಂಬ ಇಚ್ಛೆ ಜಿ¯್ಲÉಯ ಮತದಾರz್ದÁಗಿದೆ. ಆರು ತಾಲೂಕುಗಳ ಈ ಜಿಲ್ಲೆ ಇಂದಿಗೂ ಅತಂತ್ಯ ಹಿಂದುಳಿದಿದೆ. ಈ ಆರರಲ್ಲಿ ಗುರುಮಠಕಲ್ ತಾಲೂಕು ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ಉಳಿದ ಐದು ತಾಲುಕುಗಳಾದ ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ ವಡಗೇರಾ ಇವು ರಾಯಚೂರು ಸಂಸದರ ವ್ಯಾಪ್ತಿಗೆ ಬರುವ ತಾಲೂಕುಗಳಾಗಿವೆ.