ಜಿಲ್ಲೆ

ಮೊತ್ತಮ್ಮೆ ಮೋದಿ ಪ್ರದಾನಿಯಾಗಿಸುವುದೊಂದೆ ನಮ್ಮ ಗುರಿ

ಬಾಗಲಕೋಟೆ: ದೇಶದಲ್ಲಿ ಮತ್ತೆ ನರೇಂದ್ರ ಮೋದಿಯವರನ್ನು ಪ್ರದಾನಿ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೊಂದೆ ನಮ್ಮೆಲ್ಲರ ಗುರಿಯಾಗಬೇಕು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ನಗರದಲ್ಲಿ ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಮತಕ್ಷೇತ್ರ ಬಾಗಲಕೋಟೆವತಿಯಿಂದ ಬಸವೇಶ್ವರ ನೂತನ ಸಭಾಭವನದಲ್ಲಿ ಶುಕ್ರವಾರ ನಡೆದ ಹೊಸ ಮತದಾರರ ನೊಂದಣಿ, ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ ಮಹಾ ಅಭಿಯಾನದ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಭಾರತದ ಸರ್ವಾಂಗಿಣ ಅಭಿವೃದ್ಧಿಗೆ ಮೋದಿ ಅವಶ್ಯ, 2024ರ ಲೋಕಸಭಾ ಚುನಾವಣೆಯನ್ನು ಬಹಳ ಜಾಗೃತಿಯಿಂದ ಮಾಡಬೇಕಾಗಿದೆ, ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆಯನ್ನು ಕಾರ್ಯಕರ್ತರು ಅಳವಡಿಸಿಕೊಳ್ಳಿಬೇಕು, ಮುಂಬರುವ 2024 ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು,ನರೇಂದ್ರ ಮೋದಿಯವರನ್ನು ಮೊತ್ತಮ್ಮೆ ದೇಶದ ಪ್ರದಾನಿಯಾಗಿಸುವುದು ಒಂದೆ ನಿರ್ದಿಷ್ಟ ಗುರಿ ನಮ್ಮದಾಗಬೇಕು, ನರೇಂದ್ರ ಮೋದಿ ಪ್ರದಾನಿಯಾದರೆ ಮಾತ್ರ ದೇಶದಲ್ಲಿ ಸಾಮರಸ್ಯ ಮೂಡಲು ಸಾದ್ಯವಿದೆ, ಮುಂದಿನ ದಿನಗಳಲ್ಲಿ ಒಂದು ದೇಶ,ಒಂದು ಕಾನೂನ,ಒಂದು ದೇಶ ಒಂದು ಚುನಾವಣೆ ನೀತಿಗಳು ಜಾರಿಗೆ ಬರಲಿವೆ. ಇದರಿಂದ 2026 ನಂತರ ಬರುವ ಚುನಾವಣೆಗಳು ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿವೆ, ಇನ್ನು ರಾಜ್ಯದಲ್ಲಿ ಕಾಂಗ್ರಸ್ಸ್ ಸರಕಾರ ತನ್ನ ಊಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಜನರಿಗೆ ನಷ್ಟವಾಗಿದೆ ಹೊರತು ಲಾಭವಂತು ಆಗಿಲ್ಲಾ, ಇದರಿಂದ ರಾಜ್ಯದ ಆರ್ಥಿಕ ಮುಗ್ಗಟ್ಟನ್ನು ಎದುರಿಸುವು ಲಕ್ಷಣಗಳು ಹೆಚ್ಚಳವಾಗಿವೆ, ಸರಕಾರ ಬಂದು ಐದೆ ತಿಂಗಳಲ್ಲಿ ಸರಕಾರ ಹಾಗೂ ಸರಕಾರ ಸಚಿವ ಶಾಸಕರ ಮದ್ದಯೆ ಅಸಮಾಧಾನ ಜಾಸ್ತಿಯಾಗಿದೆ.

ಬಾಗಲಕೋಟೆ ಮತಕ್ಷೇತ್ರಕ್ಕೆ ಬರುವುದಾದರೆ ನಮ್ಮ ಶಾಸಕ ಅವದಿಯಲ್ಲಿ ಜಾರಿಗೆ ತಂದಿರುವ ಅನೇಕ ಅಭಿವೃದ್ಧಿ ಕೇಲಸಗಳು ಕುಂಠಿತಗೊಂಡಿವೆ, ಶಿರೂರ ಬಗವತಿ ಏತನೀರಾವರಿ ಬಗ್ಗೆ ಎಲ್ಲಿಕೂಡಾ ಸುದ್ದಿನೆ ಇಲ್ಲಾ. ನವನಗರದ ನಿರ್ವಹಣೆ ಕಷ್ಟವಾಗಿದೆ, ಸರಕಾರ ಬಂದು 5 ತಿಂಗಳಲ್ಲಿ ಈ ಗತಿಯಾದರೆ ಇನ್ನು 4 ವರೆ ವರ್ಷಗಳ ಕಾಲ ಜನರ ಗತಿ ಏನು ಎಂದರು.

ವಿಧಾನ ಪರಿಷತ್ತಿ ಮಾಜಿ ಸದಸ್ಯ ಮಾತನಾಡಿ ಕಾರ್ಯಕರ್ತರು ಸಂಪೂರ್ಣ ವ್ಯವಸ್ಥಿತವಾಗಿ ಬೂತಗಳನ್ನು ಗಟ್ಟಿಗೊಳಿಸಿಕೊಂಡು, ರಾಷ್ಟೀಯ ಹಿತಕ್ಕಾಗಿ ನರೇಂದ್ರ ಮೋದಿ ಮೊತ್ತಮ್ಮೆ ದೇಶದ ಪ್ರದಾನಿಯಾಗಲಿ ಎಂದರು.

ಬೆಳಗಾವಿ ಸಹ ಪ್ರಭಾರಿ ಬಸವರಾಜ ಯಂಕಂಚಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯೆ ಸಂಚಾಲಕರಾದ ಸತ್ಯ ನಾರಾಯಣ ಹೆಮಾದ್ರಿ ಮಾತನಾಡಿ ಅಭಿಯಾನದ ರೂಪರೇ಼ಷಗಳನ್ನು ತಿಳಿಸಿದದರು.

ಬಿಜೆಪಿ ಮುಖಂಡರಾದ ಡಾ. ಎಂ.ಎಸ್.ದಡ್ಡೆನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ,ನಗರ ಮಂಡಲ ಅಧ್ಯಕ್ಷ ಸದಾನಂಮದ ನಾರಾ. ಶಿವಾನಂದ ಟವಳಿ,ರಾಜು ರೇವನ್ಕರ,ರಾಜು ನಾಯ್ಕರ,ಸಂಗಣ್ಣ ಕಲಾದಗಿ,ಬಸವರಾಜ ಪಾಟೀಲ, ಯಮನೂರ ಕತ್ತಿ, ಬವರಾಜ ಹುನಗುಂದ,ಉಮೇಶ ಹಂಚಿನಾಳ, ನಗರಸಭೇ ಸದಸ್ಯೆ ಜ್ಯೋತಿ ಭಜಮತ್ರಿ, ಶಶಿಕಲಾ ಮಜ್ಜಗಿ,ಶಿವಲೀಲಾ ಪಟ್ಟಣಶೇಟ್ಟಿ ಸೇರಿದಂತೆ ನಗರ,ಗ್ರಾಮೀಣ ಪದಾಧಿಕಾರಿಗಳು ಭಾಗವಹಿಸಿದರು.