ಕಲಬುರಗಿ: ಕಾಂಗ್ರೆಸ್ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಚುನಾವಣೆಯ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅದ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಕಾರ್ ಮೇಲೆ ಮೊಟ್ಟೆ ಎಸೆದ ಪ್ರಕರಣ ಇದು ಬಿಜೆಪಿ ಪ್ರಾಯೋಜಕತ್ವದದಿಂದ ಆಗಿರೋದು ಎಂದರು.
ಬಿಜೆಪಿಯವರಿಗೆ ನಡುಕ ಹುಟ್ಟಿದೆ ಸಹಿಸಿಕೊಳ್ಳೊಕೆ ಆಗ್ತಿಲ್ಲ. ಮೊಟ್ಟೆ ಒಗೆಯುವುದು ದೊಡ್ಡ ಕೆಲಸ ಅಲ್ಲ. ನಮಗೆ ಮಾಡೋಕೆ ಬರೋದಿಲ್ವಾ , ಆದ್ರೆ ನಾವು ಮಾಡೋದಿಲ್ಲ .ಇದು ಚಿಲ್ಲರೆ ಕೆಲಸ ಯಾರು ಮಾಡೋದಕ್ಕೆ ಹೋಗಬಾರದು ಎಂದರು.
ಪ್ರತ್ಯೇಕ ಲಿಂಗಾಯಿತ ಧರ್ಮ ನಮ್ಮ ಅಸ್ಮಿತೆ. ಚುನಾವಣೆ ಮುಗಿದ ಮೇಲೆ ಎರಡು ಕಡೆಯ ಸ್ವಾಮೀಜಿಗಳು ಹಿರಿಯರು ಏನ್ ನಿರ್ಧಾರ ತೆಗೆದುಕೊಳ್ಳತ್ತಾರೆ ನೋಡೊಣ ಎಂದರು.
ಚುನಾವಣೆ ಸಂಧರ್ಬದಲ್ಲಿ ಅರ್ಥಕ್ಕೆ ಅನರ್ಥ ಸೃಷ್ಟಿಯಾಗುತ್ತೆ. ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಅದರದ್ದೆ ಆದ ಟೈಮ್ ಬೇಕಾಗುತ್ತೆ. ಒಂದು ವರ್ಷ ಎರಡು ವರ್ಷ ಐದು ವರ್ಷ ಆಗಬಾರದು. ಇಲ್ಲಿ ಯಾವ ಜಾತಿ ಧರ್ಮ ಕೆಲಸ ಮಾಡೋದಿಲ್ಲ. ಎಲ್ಲಾ ಜಾತಿ ಜನಾಂಗದವರು ಕಾಂಗ್ರೆಸ್ ಬೆಂಬಲ ನೀಡ್ತಿದ್ದಾರೆ ಎಂದರು.
<ಇದನ್ನ ನೀವು ಬರದಿಟ್ಟುಕೊಳ್ಳಿ ಇವತ್ತಿನ ದಿನಾಂಕದ ಜೊತೆಗೆ ಬರೆದಿಟ್ಟುಕೊಳ್ಳಿ. ನಮ್ಮಲ್ಲೊ ಯಾವುದೆ ಒಳ ಜಗಳವಿಲ್ಲ. ಮನೆಯಲ್ಲಿ ಗಂಡ ಹೆಂಡತಿ ಜಗಳ ಇರೋದಿಲ್ವಾ ಹಾಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಅಷ್ಟೆ ಎಂದು ಎಂ ಬಿ ಪಾಟೀಲ್ ಹೇಳಿದರು.