ಲಕ್ಷೆ್ಮೕಶ್ವರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗಿನಲ್ಲಿ ಕೆಲ ಕಿಡಿಗೇಡಿಗಳು ಮೊಟ್ಟೆ ಎಸೆದಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ ಜಿ .ಎಸ್. ಗಡ್ಡದೇವರಮಠ ಹೇಳಿದರು.
ಪಟ್ಟಣದ ಶಿಗ್ಲಿ ಕ್ರಾಸ್ನಲ್ಲಿ ಲಕ್ಷೆ್ಮೕಶ್ವರ ತಾಲೂಕು ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸರ್ಫರಾಜ ಸೂರಣಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ಎಸ್.ಪಿ. ಬಳಿಗಾರ, ಚನ್ನಪ್ಪ ಜಗಲಿ, ಪುರಸಭೆ ಸದಸ್ಯ ಪರಮೇಶ ಲಮಾಣಿ, ರಾಮಣ್ಣ ಲಮಾಣಿ (ಶಿಗ್ಲಿ ), ಸೋಮಣ್ಣ ಬೆಟಗೇರಿ, ಅಣ್ಣಪ್ಪ ರಾಮಗೇರಿ, ಬಾಬಣ್ಣ ಅಳವಂಡಿ, ದಾದಾಪೀರ್ ಮುಚ್ಚಾಲೆ, ನಾಗರಾಜ ಮಡಿವಾಳರ, ರಿಯಾಜ ಗದಗ, ಮಂಜುನಾಥ ಗೌರಿ, ಬಸವರಾಜ ಹಿರೇಮನಿ, ಭಾಗ್ಯಶ್ರೀ ಬಾಬಣ್ಣ, ರಫೀಕ್ ಕಲಬುರ್ಗಿ, ಎಂ.ಎಂ. ಗದಗ, ಕಿರಣ ನವಲೆ, ಫಕೀರೇಶ ಮ್ಯಾಟಣ್ಣವರ, ಪಕ್ಷದ ಕಾರ್ಯಕರ್ತರು ಇದ್ದರು. ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮನವಿ ಸ್ವೀಕರಿಸಿದರು.