ಜಿಲ್ಲೆ

ಮೈಸೂರು ರೇಸ್ ಕ್ಲಬ್‌ನಲ್ಲಿ ಆ.1ರಿಂದ ಬ್ರಿಜ್ ಚಾಂಪಿಯನ್‌ಷಿಪ್

ಮಂಜುನಾಥ ತಿಮ್ಮಯ್ಯ

ಮೈಸೂರು: ಮೈಸೂರು ಜಿಲ್ಲಾ ಬ್ರಿಜ್ ಅಸೋಸಿಯೇಷನ್ ವತಿಯಿಂದ ಅಂತಾರಾಜ್ಯ ಬ್ರಿಜ್ ಚಾಂಪಿಯನ್‌ಷಿಪ್ ಅನ್ನು ಆ.1ರಿಂದ 5 ದಿನಗಳ ಕಾಲ ನಗರದ ಮೈಸೂರು ರೇಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ.

ಆ.1ರಂದು ಮಧ್ಯಾಹ್ನ 1ಕ್ಕೆ ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ನಿತ್ಯ ಬೆಳಗ್ಗೆ 7.30ರಿಂದ ರಾತ್ರಿ 7.30ರವರೆಗೆ ಪಂದ್ಯಗಳು ನಡೆಯಲಿವೆ.

ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸುತ್ತಿದ್ದು, ಇಲ್ಲಿ ಆಯ್ಕೆಯಾದ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ಎನ್.ಜಯಪಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಸ್ಪೀಟ್ ಎಲೆಗಳನ್ನು ಬಳಸಿ ಆಡುವ ಆಟ ಇದಾಗಿದ್ದು, ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ. ಗಣಿತದಲ್ಲಿ ಚಾಕಚಕ್ಯತೆ ದೊರೆಯುತ್ತದೆ. ಇದರಿಂದ ಗಣಿತದಲ್ಲಿ ಮೊದಲು ಶೇ.30 ಅಂಕ ಪಡೆಯುತ್ತಿದ್ದವರು ಶೇ.70 ಅಂಕ ಪಡೆಯುವ ಮಟ್ಟಿಗೆ ಸಾಧನೆ ಮಾಡುವುದು ಸಾಧ್ಯವಾಗಿದೆ. ಕೆಲವೊಂದು ಶಾಲೆಗಳಲ್ಲೂ ಇದನ್ನು ಕಲಿಸಲಾಗುತ್ತಿದೆ. ಬ್ರಿಜ್ ಬೆಟ್ಟಿಂಗ್ ಇಲ್ಲದ ಆಟವಾಗಿದೆ ಎಂದರು.

ಪದಾಧಿಕಾರಿಗಳಾದ ಉಮಾಪತಿ, ಡಾ. ಪುಟ್ಟಬಸಪ್ಪ ಇದ್ದರು.