ಮೈಸೂರು: ಮೈಸೂರು ರೇಸ್ ಕ್ಲಬ್‌ನಿಂದ ನಡೆಸಲಾಗುವ ಪ್ರಸಕ್ತ 2023ನೇ ಸಾಲಿನ ಒಟ್ಟು 8 ದಿನಗಳ ಮೈಸೂರು ಬೇಸಿಗೆ ರೇಸ್‌ಗಳು ಮೇ 26ರಂದು ಪ್ರಾರಂಭವಾಗಲಿವೆ.
ವಾರಕೊಮ್ಮೆ ಪ್ರತಿ ಶುಕ್ರವಾರ ರೇಸ್ ನಡೆಯಲಿದ್ದು, ಜುಲೈ 14ಕ್ಕೆ ಕೊನೆಗೊಳ್ಳಲಿದೆ. ಟ್ರೋಫಿಗಳು, ಕಪ್‌ಗಳ ಮೊತ್ತವೂ ಸೇರಿದಂತೆ ಒಟ್ಟು ಮೂರು ಕೋಟಿ ರೂ. ಸ್ಟೇಕ್ಸ್ ಹಣವನ್ನು ಈ ಸಾಲಿನ ಬೇಸಿಗೆ ರೇಸ್‌ಗಳಿಗೆ ಪ್ರಕಟಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಹಾಗೂ ಸೀನಿಯರ್ ಸ್ಟೂವರ್ಡ್ ವೈ.ಬಿ.ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ಲಬ್‌ನ ಆಶ್ರಯದಲ್ಲಿರುವ 425 ರೇಸ್ ಕುದುರೆಗಳು ಹಾಗೂ ವಿವಿಧ ಸ್ಥಳದ ಸುಮಾರು 50 ರೇಸ್ ಕುದುರೆಗಳು ಈ ಸಾಲಿನ ಬೇಸಿಗೆ ರೇಸ್‌ಗಳಲ್ಲಿ ಭಾಗವಹಿಸಲಿವೆ. 24 ಸ್ಥಳೀಯ ತರಬೇತುದಾರರು (ಟ್ರೈನರ್‌ಗಳು) ಹಾಗೂ ಇತರ ಕೇಂದ್ರಗಳ ತರಬೇತುದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ದೇಶದ ಪ್ರಮುಖ ಜಾಕಿಗಳು ಸೇರಿದಂತೆ 75ಕ್ಕೂ ಹೆಚ್ಚಿನ ಸ್ಥಳೀಯ ಜಾಕಿಗಳು ಈ ಬೇಸಿಗೆ ಋತುವಿನಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಬೇಸಿಗೆ ರೇಸ್‌ಗಳು ನಡೆಯುವ ದಿನಗಳಂದು ಪ್ರವೇಶ ದರ 200 ರೂ. ಇದ್ದು, ಆಫ್‌ಕೋರ್ಸ್ ಬೆಟ್ಟಿಂಗ್ ದಿನಗಳಲ್ಲಿ ಪ್ರವೇಶ ದರ 100 ರೂ.ಗೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.