ಜಿಲ್ಲೆ

ಮೈಸೂರು ಪಾಲಿಕೆ ವಲಯ ಆಯುಕ್ತರಿಗೆ 25 ಸಾವಿರ ರೂ. ದಂಡ

ಮಂಜುನಾಥ ತಿಮ್ಮಯ್ಯ

ಮೈಸೂರು: ಸಕಾಲಕ್ಕೆ ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಮೈಸೂರು ಮಹಾನಗರಪಾಲಿಕೆಯ 9ನೇ ವಲಯ ಆಯುಕ್ತ ಶಿವಕುಮಾರ್ ಅವರಿಗೆ 25 ಸಾವಿರ ರೂ. ದಂಡವನ್ನು ರಾಜ್ಯ ಮಾಹಿತಿ ಆಯೋಗವು ವಿಧಿಸಿದೆ.

ಸಿದ್ಧಾರ್ಥನಗರದ ಸನ್ಮಾರ್ಗ 6ನೇ ಮುಖ್ಯರಸ್ತೆಯ ನಿವೇಶನದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ನಕ್ಷೆ ಉಲ್ಲಂಘನೆ ಕುರಿತು ತೆಗೆದುಕೊಂಡಿರುವ ಕ್ರಮ, ಅನುಮೋದಿತ ನಕ್ಷೆ, ದಾಖಲಾತಿ ನೀಡುವಂತೆ ಜಯನಗರದ ಸಾ.ತಿ.ಸದಾನಂದಗೌಡ ಮಾಹಿತಿ ಕೋರಿ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

475 ದಿನಗಳ ಕಾಲ ಮಾಹಿತಿ ನೀಡಲು ವಿಳಂಬ ಮಾಡಿದ್ದರು. ಈ ಕುರಿತು ದೂರುದಾರರು ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಇವರ ಅರ್ಜಿ ವಿಚಾರಣೆ ಮಾಡಿದ ರಾಜ್ಯ ಮಾಹಿತಿ ಆಯುಕ್ತ ಡಾ.ಎಚ್.ಸಿ.ಸತ್ಯನ್ ಅವರು, ಈ ಅಧಿಕಾರಿಯ ಮುಂದಿನ ತಿಂಗಳ ಸಂಬಳದಲ್ಲಿ ಇಷ್ಟು ಹಣವನ್ನು ಏಕಕಂತಿನಲ್ಲೇ ಕಡಿತಗೊಳಿಸಲು ಆದೇಶಿಸಿದ್ದಾರೆ.

ದೂರುದಾರರಿಗೆ 10 ಸಾವಿರ ರೂ. ಪರಿಹಾರಕ್ಕೂ ನೀಡಲು ಸೂಚಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಲಾಗಿದೆ.