ಜಿಲ್ಲೆ

ಮೈಸೂರು ಪಾಲಿಕೆ ಆಯುಕ್ತರಾಗಿ ಶೇಖ್ಆ ಸೀಫ್ ಅಧಿಕಾರ ಸ್ವೀಕಾರ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಶೇಖ್ ತನ್ವೀರ್ ಆಸೀಫ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ಪಾಲಿಕೆ ಕಚೇರಿಯಲ್ಲಿ ನೂತನ ಆಯುಕ್ತರಿಗೆ ನಿರ್ಗಮಿತ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ಇತ್ತೀಚೆಗೆೆ ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದ್ದು,

ಅದರಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಶೇಖ್ ತನ್ವೀರ್ ಆಸೀಫ್ ಅವರನ್ನು ಈ ಹುದ್ದೆಗೆ ವರ್ಗಾಯಿಸಲಾಗಿತ್ತು. ಆ ಪ್ರಕಾರ 2017ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಸೀಫ್ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ವರ್ಗಾವಣೆಗೊಂಡಿರುವ ಶರೀಫ್‌ಗೆ ಯಾವುದೇ ಸ್ಥಳ, ಹುದ್ದೆ ತೋರಿಸಿಲ್ಲ.

ಕಲಬುರಗಿ ಮೂಲಕ ಆಸೀಫ್ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದವರು. 2017ರಲ್ಲಿ 25ನೇ ರ‌್ಯಾಂಕ್‌ನೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.