ಮೈಸೂರು: ಕರ್ನಾಟಕ ನಗರ ಪಾಲಿಕೆ ಅಧಿನಿಯಮ ಪ್ರಕಾರ ಕಾಂಗ್ರೆಸ್‌ನ ಐವರನ್ನು ಮೈಸೂರು ನಗರಪಾಲಿಕೆಗೆ ನಾಮ ನಿರ್ದೇಶನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜೇಂದ್ರನಗರದ ಆರ್.ಶ್ರೀನಿವಾಸಮೂರ್ತಿ, ಗಾಯತ್ರಿಪುರಂನ ಕಲ್ಪನಾ, ಇಟ್ಟಿಗೆಗೂಡಿನ ಆರ್.ಎಚ್.ಕುಮಾರ್, ಮಂಡಿ ಮೊಹಲ್ಲಾದ ಎಂ.ಯು.ಬಾಲರಾಜು, ಜಯಲಕ್ಷ್ಮೀಪುರಂನ ನಿರಾಲ್ ಸಿ.ಪಾ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಪಿ.ರಾಜು ಆದೇಶಿಸಿದ್ದಾರೆ.