ಜಿಲ್ಲೆ

ಮೈಸೂರು ನಗರಕ್ಕೆ ಸಮಸ್ಯೆ ಇಲ್ಲ: ಲಕ್ಷ್ಮೀಕಾಂತರೆಡ್ಡಿ

ಮೈಸೂರು: ಕೆ.ಆರ್.ಎಸ್ ಹಾಗೂ ಕಬಿನಿಯಲ್ಲಿ ಲಭ್ಯ ಇರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಮಳೆ ಆಗದಿದ್ದರೂ ಸದ್ಯ ಲಭ್ಯ ಇರುವ ನೀರು ಆಗಸ್ಟ್ 15ರ ವರೆಗೂ ಸಾಕಾಗುತ್ತದೆ ಎಂದು ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ನಗರಪಾಲಿಕೆಯ ವ್ಯಾಪ್ತಿಯಲ್ಲಿ ಕಬಿನಿ ಹಾಗೂ ಕೆಆರ್‌ಎಸ್ ವ್ಯಾಪ್ತಿಯಲ್ಲಿ ವ್ಯವಸಾಯಕ್ಕೆ ನೀರನ್ನು ಬಳಸುತ್ತಿಲ್ಲ. ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಕಬಿನಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಳಕೆಗೆ ಕೊರತೆ ಇಲ್ಲ ಎಂದು ವಿವರಿಸಿದರು.
ಕಬಿನಿಯಿಂದ 19 ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತಿದೆ. ಉಳಿದ ವಾರ್ಡ್‌ಗಳಿಗೆ ಕೆ.ಆರ್.ಎಸ್. ಡ್ಯಾಮ್ನಿಂದ ನೀರು ನೀಡಲಾಗುತ್ತಿದೆ. ಮೇಳಾಪುರ ದಿಂದ 100 ಎಂಎಲ್‌ಡಿ, ಬೆಳಗೊಳದಿಂದ 60 ಎಂಎಲ್‌ಡಿ, ಕಬಿನಿಯಿಂದ 80 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿದೆ. ಆರ್‌ಬಿಎಲ್ ನಿಂದ 50 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿದೆ. ಮಳೆ ಇಲ್ಲದೆ ಇದ್ದರೂ ಆಗಸ್ಟ್ 15 ರವರೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವುದಿಲ್ಲ ಎಂದು ಸಭೆಗೆ ಲಕ್ಷ್ಮೀಕಾಂತರೆಡ್ಡಿ ಮಾಹಿತಿ ನೀಡಿದರು.