ಬೇಲೂರು: ಮೈಸೂರು ದಸರಾ ಮಾದರಿಯಲ್ಲೇ ಬೇಲೂರಿನಲೂ ಶ್ರೀ ರಂಭಾಪುರಿ ಪೀಠವು ಶರನ್ನವರಾತ್ರಿ ಪ್ರಯುಕ್ತ ಏರ್ಪಡಿಸಿರುವ ೧೧ ದಿನಗಳ ದಸರಾ ದರ್ಬಾರ್, ಜನಜಾಗೃತಿ ಧರ್ಮ ಸಮ್ಮೇಳನ ವಿಜೃಂಭಣೆಯಿAದ ಜರುಗಲಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಭಾಪುರಿ ಶಾಖಾ ಮಠದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚರ್ಯ ಸ್ವಾಮೀಜಿ ಹೇಳಿದರು.
ಬೇಲೂರು ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣ ೧೧ ದಿನಗಳ ಕಾಲ ನಡೆಯಲಿರುವ ಪವಿತ್ರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಪ್ರಚಾರದ ರೇಣುಕಾಚಾರ್ಯರ ಸ್ಥಬ್ದ ಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆ ಹಾಗೂ ತಾಲೂಕಿನಾದ್ಯಂತ ರೇಣುಕಾಚಾರ್ಯರ ತತ್ವ ಸಂದೇಶಗಳು ಎಲ್ಲೆಡೆ ಬಿತ್ತರಿಸುತ್ತ ದಸರಾ ಧರ್ಮ ಸಮ್ಮೇಳನಕ್ಕೆ ಇದು ಮುನ್ನುಡಿ ಬರೆಯಲಿz. ಈ ಸಮ್ಮೇಳನದಲ್ಲಿ ನಾಡಿನ ಗಣ್ಯರು, ಸಾಹಿತಿಗಳು, ಚಿಂತಕರು ಹಾಗೂ ವಿವಿಧ ಕ್ಷೇತ್ರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ರಾಷ್ಟ್ರಧರ್ಮ ಸಂಘಟನೆಯ ಅಧ್ಯಕ್ಷ ಸಂತೋಷ್ ಕೆಂಚಾAಬ ಮಾತನಾಡಿ, ಸಾವಿರಾರು ವರ್ಷಗಳಿಂದ ಎಲ್ಲಾ ಧರ್ಮಕ್ಕೂ ಮಾರ್ಗದರ್ಶನವಾದ ಸನತಾನ ಧರ್ಮವನ್ನು ರಾಜ್ಯದ ಎಲ್ಲ ಭಾಗಗಳಲ್ಲಿ ದಸರಾ ಧರ್ಮ ಸಮ್ಮೇಳನದ ಮೂಲಕ ಆಚರಿಸಿ ಕೊಂಡು ಬರಲಾಗುತ್ತಿದೆ. ಮಾನವ ಧರ್ಮಕ್ಕೆ ಜಯವಾಗಲಿ. ವಿಶ್ವಕ್ಕೆ ಶಾಂತಿ ಸಿಗಲಿ ಎಂಬ ವೇದ ವಾಖ್ಯದೊಂದಿಗೆ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಅಲ್ಲದೆ ಬೇಲೂರು ಪಟ್ಟಣದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದ್ದು, ಈ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಹಗರೆ ದಿಲೀಪ್, ಕಾರ್ಯದರ್ಶಿ ಲಿಂಗರಾಜು, ಸ್ವಾಗತ ಸಮಿತಿ ಅಧ್ಯಕ್ಷ ಕೌರಿ ರಾಜಶೇಖರ್. ಅಖಿಲ ಭಾರತ ವೀರಶೈವ ಮಹಾಸಭಾದ ಲೋಕೇಶ್, ರೇಣುಕಾರಾದ್ಯ, ವಿಕ್ರಮ್ ಕೌರಿ, ಚಂದ್ರಶೇಖರ್, ಕಚೇರಿ ನಿರ್ವಾಹಣ ಸಮಿತಿ ಅಧ್ಯಕ್ಷ ಮಾ. ಶಿವಮೂರ್ತಿ ಇದ್ದರು.