ಜಿಲ್ಲೆ

ಮೈಸೂರು ದಸರಾ:  22ರಿಂದ  ಕನ್ನಡ ಪುಸ್ತಕ ಮಾರಾಟ ಮೇಳ

ಮೈಸೂರು: ದಸರಾ ಕನ್ನಡ ಪುಸ್ತಕ ಮಾರಾಟ ಮೇಳ ಸೆ.22ರಿಂದ ಅಕ್ಟೋಬರ್ 1ರವರೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಮೇಳದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಸಂಕಿರಣ ಸೇರಿದಂತೆ ಅನೇಕ ಸಾಹಿತ್ಯಕ ಚಟುವಟಿಕೆ ಆಯೋಜಿಸಲಾಗುವುದು.

ಆಸಕ್ತ ಲೇಖಕರು ಹಾಗೂ ಪ್ರಕಾಶಕರು ತಮ್ಮ ಹೊಸ ಪುಸ್ತಕ ಬಿಡುಗಡೆ ಮಾಡಲು ಬಯಸಿದ್ದಲ್ಲಿ ಇದಕ್ಕೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಖ್ಯಾತ ಸಾಹಿತಿಗಳು ಈ ಪುಸ್ತಕಗಳನ್ನು ಬಿಡುಗಡೆ ಮಾಡುವರು.

ಪುಸ್ತಕ ಬಿಡುಗಡೆ ಮಾಡಲು ಆಸಕ್ತರು ಮೊದಲು ನೋಂದಾಯಿಸಬೇಕು, ಬಿಡುಗಡೆ ಮಾಡಲು ಬಯಸುವ ಪುಸ್ತಕದ ಎರಡು ಪ್ರತಿಯೊಂದಿಗೆ ನಿಗದಿತ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕು.

ಆಸಕ್ತರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರನ್ನು ಸಂಪರ್ಕಿಸಬಹುದು ಎಂದರು ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.