ಜಿಲ್ಲೆ

ಮೈಸೂರು ಜಿಲ್ಲೆಯ ನಾಲ್ವರಿಗೆ ಎಎಪಿ ಟಿಕೆಟ್

ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯ ಆಮ್ ಆದ್ಮಿ ಪಾರ್ಟಿಯ ಮೊದಲ ಪಟ್ಟಿ ಪ್ರಕಟಗೊಂಡಿದ್ದು, ಮೈಸೂರು ಜಿಲ್ಲೆಯ ನಾಲ್ವರು ಟಿಕೆಟ್ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರು 80 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.


ಪಿರಿಯಾಪಟ್ಟಣದಿಂದ ರಾಜಶೇಖರ್, ಚಾಮರಾಜ ಕ್ಷೇತ್ರದಿಂದ ಮಾಲವಿಕ ಗುಬ್ಬಿವಾಣಿ, ನರಸಿಂಹರಾಜದಿಂದ ಧರ್ಮಶ್ರೀ ಹಾಗೂ ತಿ.ನರಸೀಪುರ ಕ್ಷೇತ್ರದಿಂದ ಸೋಸಲೆ ಸಿದ್ದರಾಜು ಟಿಕೆಟ್ ಪಡೆದಿದ್ದಾರೆ.


2018ರ ಚುನಾವಣೆಯಲ್ಲಿ ಮಾಲವಿಕ ಗುಬ್ಬಿವಾಣಿ ಅವರು ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಎಸ್‌ಪಿಯಲ್ಲಿ ಗುರುತಿಸಿಕೊಂಡಿದ್ದ ಕರಾಟೆ ಸಿದ್ದರಾಜು ಈಚೆಗೆ ಎಎಪಿ ಸೇರ್ಪಡೆಯಾಗಿದ್ದರು. ಅವರಿಗೆ ತಿ.ನರಸೀಪುರ ಕ್ಷೇತ್ರದಿಂದ ಟಿಕೆಟ್ ದೊರೆತಿದೆ.