ಜಿಲ್ಲೆ

ಮೈಸೂರು ಜಿಪಂ ಸಿಇಒ ವಿರುದ್ಧ ಕ್ರಮ ಕೈಗೊಳ್ಳಿ

ಕಲಬುರಗಿ: ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ಮತ್ತು ಮೈಸೂರು ಜಿಪಂ ಸಿಇಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ವೈದ್ಯರ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಸಾಂಕೇತಿಕ ಪ್ರದರ್ಶನ ನಡೆಸಲಾಯಿತು.
ಘಟಕದ ಮುಖ್ಯಸ್ಥ ಡಾ.ಕಿರಣ ದೇಶಮುಖ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ, ಡಾ.ನಾಗೇಂದ್ರ ಮೇಲೆ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರೊನಾ ಹೊತ್ತಿನಲ್ಲಿ ವೈದ್ಯರು ರಿಸ್ಕ್ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಅಧಿಕಾರಿಗಳು ಇಲ್ಲದ ಆಪಾದನೆ ಹೊರಿಸುವ ಮೂಲಕ ಸಾವಿಗೆ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.
ಡಾ.ಸಿದ್ದಾರ್ಥ ಕೋರವಾರ, ಡಾ.ಅರವಿಂದ ಕಟ್ಟಿ, ಈರಣ್ಣ ಝಳಕಿ, ಸಚಿನ್ ಶಿರವಾಳ, ಮಲ್ಲಿಕಾಜರ್ುನ ಹಲಕಟರ್ಿ, ಓವೇಜ್, ಶಿವಾನಂದ, ಮಹೇಶ ವಟವಟಿ ಇತರರಿದ್ದರು. ಈ ಹಿಂದೆ ಬೀದರ್ ಡಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಕಲಬುರಗಿ ಡಿಸಿ ವೈದ್ಯರನ್ನು ದೇಶದ್ರೋಹಿಗಳು ಎಂದು ಜರಿದಿದ್ದರು. ಬಾಗಲಕೋಟೆ ಸಿಇಒ ನಿಂದಿಸುವುದು ಹೀಗೆ ಹಲವು ಪ್ರಸಂಗಗಳು ನಡೆದಿವೆ. ನಂಜನಗೂಡು ಟಿಎಚ್ಒ ಪ್ರಕರಣದ ಬಗ್ಗೆ ಸಕರ್ಾರ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ಆತ್ಮಹತ್ಯೆಗೆ ಕಾರಣರಾಗಿರುವ ಮೈಸೂರು ಜಿಪಂ ಸಿಇಒ ಅವರನ್ನು ಅಮಾನತು ಮಾಡಬೇಕು. ಮೃತರ ಪರಿವಾರಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಸಿಎಂಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ. ಇದಕ್ಕೂ ಮುನ್ನ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಡಾ.ನಾಗೇಂದ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.