ಮೈಸೂರು: ನಗರದ ಜಯದೇವ ಆಸ್ಪತ್ರೆಯಲ್ಲಿ 2010 ರಿಂದ ಇಲ್ಲಿಯವರೆಗೆ ಒಂದು ಲಕ್ಷ ಒಳರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಜನರ ವಿಶ್ವಾಸಗಳಿಸಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಒಂದು ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿದ ಸಂದರ್ಭ ನಗರದ ಜಯದೇವ ಆಸ್ಪತ್ರೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ವೈದ್ಯರೊಂದಿಗೆ ಕೇಕ್ ಕತ್ತರಿಸಿ, ಅವರು ಮಾತನಾಡಿದರು.
ಆಸ್ಪತ್ರೆ ಅಧೀಕ್ಷಕ ಡಾ.ಸದಾನಂದ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಇದುವರೆಗೆ 1 ಲಕ್ಷದ 11 ಸಾವಿರ ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 26,000 ರೋಗಿಳಿಗೆ ಕ್ಯಾಥ್‌ಲ್ಯಾಬ್ ಪ್ರೊಸಿಜರ್ಸ್ ಮಾಡಲಾಗಿದ್ದು, 46,600 ರೋಗಿಗಳಿಗೆ ಆಂಜಿಯೋಗ್ರಾಮ ಮಾಡಲಾಗಿದೆ. 65 ಸಾವಿರ ಜನರಿಗೆ ಟಿ.ಎಂ.ಟಿ. , 4 ಲಕ್ಷದ 75 ಸಾವಿರ ಜನರಿಗೆ ಎಕೋ ಟೆಸ್ಟ್ ಮಾಡಲಾಗಿದೆ. 7 ಲಕ್ಷದ 10 ಸಾವಿರ ಜನರಿಗೆ ಇ.ಸಿ.ಜಿ., 2500 ಜನರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವಿವರಿಸಿದರು.
ಮಾನವೀಯತೆಗೆ ಮೊದಲ ಆದ್ಯತೆ ಎಂಬ ಧ್ಯೇಯದೊಂದಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದೆ. ಪ್ರತಿನಿತ್ಯ 700 ಹೊರರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಆಸ್ಪತ್ರೆಯ ಸ್ವಚ್ಛತೆಯ ನಿರ್ವಹಣೆಯನ್ನು ಹೌಸ್‌ಕೀಪಿಂಗ್‌ನವರು ಉತ್ತಮವಾಗಿ ಮಾಡುತ್ತಿದ್ದಾರೆ. ಎಲ್ಲ ವಿಭಾಗವು ಉತ್ತಮವಾಗಿ ಕೆಲಸ ಮಾಡುತ್ತಿರುವುದೇ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ವೈದ್ಯರಾದ ಡಾ.ಹರ್ಷಬಸಪ್ಪ, ಡಾ. ರಜಿತ್, ಡಾ.ದಿನೇಶ್, ಡಾ. ವೀಣಾನಂಜಪ್ಪ, ಡಾ.ಹೇಮಾರವೀಶ್, ಡಾ. ಮಧುಪ್ರಕಾಶ್, ಡಾ. ಜಯಪ್ರಕಾಶ್, ಡಾ. ದೇವರಾಜ್, ಡಾ. ಶ್ರೀನಿಧಿ ಹೆಗ್ಗಡೆ, ಡಾ.ವಿಶ್ವನಾಥ್, ಡಾ.ಮಂಜುನಾಥ್, ಆರ್.ಎಂ.ಓ. ಪಶುಪತಿ, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿ.ಆರ್.ಓ. ವಾಣಿಮೋಹನ್, ಚಂಪಕಮಾಲಾ ಇದ್ದರು.