ಜಿಲ್ಲೆ

ಮೈಸೂರು ಅರಮನೆ ಆಡಳಿತ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯಗೆ 25 ಸಾವಿರ ರೂ. ಜುಲ್ಮಾನೆ

ಮೈಸೂರು: ಮೈಸೂರು ಅರಮನೆ ಆಡಳಿತ ಮಂಡಳಿ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರಲಿದೆ ಎಂದು ಹೇಳಿರುವ ಮಾಹಿತಿ ಆಯೋಗವು ಮಾಹಿತಿ ನೀಡದ ಈ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರಿಗೆ 25 ಸಾವಿರ ರೂ. ದಂಡ ವಿಧಿಸಿದೆ.

ಈ ಕಾಯ್ದೆಯಡಿ ಮಾಹಿತಿ ನೀಡುವಂತೆ ಸಾ.ತಿ.ಸದಾನಂದಗೌಡ ಅರ್ಜಿ ಸಲ್ಲಿಸಿದರೂ, ಕಾಲಮಿತಿಯೊಳಗೆ ಮಾಹಿತಿ ಕೊಟ್ಟಿರಲಿಲ್ಲ. ಹೀಗಾಗಿ ಎರಡು ಬಾರಿ ಮೇಲ್ಮನವಿ ಸಲ್ಲಿಸಲಾಗಿತ್ತು.

ವಿಚಾರಣೆ ಸಂದರ್ಭದಲ್ಲಿ ಮೈಸೂರು ಅರಮನೆ ಮಂಡಳಿ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುವುದಿಲ್ಲ ಎಂದು ಮಂಡಳಿಯ ಪರ ವಕೀಲರು ವಾದ ಮಂಡಿಸಿದ್ದರು.

ಈ ಕುರಿತು ಮೇಲ್ಮನವಿದಾರರ ಹೇಳಿಕೆ, ದಾಖಲೆಗಳ ಆಧಾರ ಮೇಲೆ ಮಾಹಿತಿ ಆಯೋಗದ ಆಯುಕ್ತ ಡಾ.ಎಚ್.ಸಿ.ಸತ್ಯನ್ ಈ ತೀರ್ಪು ನೀಡಿದ್ದು, ಮೇಲ್ಮನವಿದಾರ ಸಾ.ತಿ.ಸದಾನಂದಗೌಡ ಅವರಿಗೆ 50 ಸಾವಿರ ರೂ. ಪರಿಹಾರ ನೀಡಲೂ ಆದೇಶಿಸಿದ್ದಾರೆ.