ಜಿಲ್ಲೆ

ಮೈಸೂರು ಅರಮನೆ ಅಂಗಳದಲ್ಲಿ ಕನ್ನಡದ ಕಂಪು

ಮೈಸೂರು : ಮೈಸೂರಿನಲ್ಲಿ 62ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ. ಪೂರ್ಣ ಕುಂಭದ ಮೂಲಕ ಜಿಲ್ಲಾ ಉಸ್ತುವ ಎಸ್.ಟಿ.ಸೋಮಶೇಖರ್ ಅವರಗೆಪೂರ್ಣ ಕುಂಭ ಸ್್ವಾಗತ

ಅರಮನೆ ಅವರಣದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ. ಬಳಿಕ ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ. ನಂತರ ಬಲರಾಮ ದ್ವಾರದ ಬಳಿಯಿರುವ ಕೋಟೆ ಆಂಜನೇಯ ಸ್ವಾಮಿ ದೇಗುಲದ ಮುಂಭಾಗ ರಾಷ್ಟ್ರ ಹಾಗೂ ರಾಜ್ಯಧ್ವಜ ಧ್ವಜಾರೋಹಣ.
ಈ ಬಾರಿ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಕಲಾತಂಡಗಳಿಗೆ ಬ್ರೇಕ್. ಪೊಲೀಸ್ ಹಾಗೂ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನವೂ ಇಲ್ಲ. ಅಶ್ವಾರೋಹಿ ದಳದಿಂದ ಗೌರವ ಸಮರ್ಪಿಸಿ ಸರಳವಾಗಿ ಕಾರ್ಯಕ್ರಮ ಆಯೋಜನೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ.
ಸಚಿವರಿಗೆ ಸಾಥ್ ನೀಡಿದ ಶಾಸಕರಾದ ಎಲ್. ನಾಗೇಂದ್ರ ಜಿ ಟಿ ದೇವೇಗೌಡ, ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್ , ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹಾಗೂ ಮತ್ತಿತರ ಪ್ರಮುಖರು ಭಾಗಿ.