ಜಿಲ್ಲೆ

ಮೈಸೂರಿನಲ್ಲಿ ಶ್ರೀ ಶಾರದಾ ದೇವಿ ಜಯಂತಿ

Mysuru

ಮೈಸೂರು: ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಶ್ರೀ ಶಾರದಾ ದೇವಿಯ 170ನೇ ಜಯಂತಿ ಪ್ರಯುಕ್ತ ‘ಆಧ್ಯಾತ್ಮಿಕ ಜಗತ್ತು’ ಕಾರ್ಯಕ್ರಮ ಗುರುವಾರ ರಾಮಕೃಷ್ಣನಗರದ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ನಡೆಯಿತು.

ಶಾರದಾಮಾತೆಯ ಭಾವಚಿತ್ರಕ್ಕೆ ಮೇಯರ್ ಶಿವಕುಮಾರ್ ಪುಷ್ಪನಮನ ಸಲ್ಲಿಸಿ ಮಾತನಾಡಿ, ರಾಮಕೃಷ್ಣಪರಮಹಂಸ ಹಾಗೂ ಶಾರದಾದೇವಿ ಅವರು ದೇಶದಲ್ಲಿ ಸದೃಢ ಯುವಶಕ್ತಿ ನಿರ್ಮಾಣದ ಸಂಕಲ್ಪ ತೊಟ್ಟಿದ್ದರು. ಅವರ ಮಾನಸಪುತ್ರ ಸ್ವಾಮಿ ವಿವೇಕಾನಂದರು ಎಲ್ಲವನ್ನು ಸಾಧಿಸಿ ಭಾರತವನ್ನು ವಿಶ್ವಗುರುವಾಗಿಸಲು ಶ್ರಮಿಸಿದರು ಎಂದರು.

ಸಮಾಜಸೇವಕ ಕೆ.ರಘುರಾಂ ವಾಜಪೇಯಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ವೈದ್ಯ ಸಾಹಿತಿ ಎಸ್.ಪಿ. ಯೋಗಣ್ಣ, ಮೇಲುಕೋಟೆ ವೆಂಗಿಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮಿ, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಇತರರು ಇದ್ದರು.