ಮೈಸೂರು: ಕಲ್ಯಾಣಗಿರಿಯ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ವಿಷ್ಣು ದೀಪೋತ್ಸವ ಶ್ರದ್ಧಾ, ಭಕ್ತಿಯೊಂದಿಗೆ ನೆರವೇರಿತು. 5000 ಮಹಿಳೆಯರು ಏಕಕಾಲಕ್ಕೆ ದೀಪ ಹಚ್ಚಿದರು.
ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಾತನಾಡಿ, ಸಹಾಸ್ರಾರು ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವ ಈ ಸೌಹಾರ್ದ, ಸಾಮರಸ್ಯವನ್ನ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ದೇಶದ ನಾಗರಿಕರ ಮುಂದಿದೆ ಎಂದರು.
ಮೇಯರ್ ಶಿವಕುಮಾರ್, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಂಚಾಲಕ ಮಾ.ವೆಂಕಟರಾಮ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಬಿಜೆಪಿ ಮುಖಂಡರಾದ ಅನಿಲ್ ಥಾಮಸ್, ಜೋಗಿ ಮಂಜು, ಜಯರಾಮ್, ದೇವಸ್ಥಾನದ ಸಂಸ್ಥಾಪಕ ಎಚ್.ಜಿ. ಗಿರಿಧರ್ ಹಾಗೂ ಇತರರು ಇದ್ದರು.