ಮೈಸೂರು: ನೇಗಿಲಯೋಗಿ ಮರುಳೇಶ್ವರ ಒಕ್ಕಲಿಗ ವಧು-ವರರ ವೇದಿಕೆಯು ನಗರದಲ್ಲಿ 10ನೇ ವರ್ಷದ ‘ಒಕ್ಕಲಿಗ ವಧು-ವರರ ಸಮಾವೇಶ’ವನ್ನು ಮಾರ್ಚ್ 21 ರಂದು ಆಯೋಜಿಸಿದೆ.
ಜಯನಗರದ ಹೊಸ ಕೋರ್ಟ್ ಕಟ್ಟಡ ಮುಂಭಾಗದ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ಸಮಾವೇಶ ಪ್ರಾರಂಭವಾಗಲಿದೆ ಎಂದು ವೇದಿಕೆಯ ಸದಸ್ಯೆ ಮಂಜುಳಾ ಭದ್ರೇಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆನ್‌ಲೈನ್ ಮತ್ತು ಆ್ ಲೈನ್ ಎರಡು ರೀತಿಯಲ್ಲೂ ಸಮಾವೇಶದಲ್ಲಿ ಭಾಗಿಯಾಗಬಹುದಾಗಿದೆ. ಬೆಂಗಳೂರು, ಮಂಡ್ಯ, ಕೆ.ಆರ್.ಪೇಟೆಯಲ್ಲಿರುವ ವೇದಿಕೆಯ ವಧು-ವರರ ಮಾಹಿತಿ ಕೇಂದ್ರದಲ್ಲಿ 1500ಕ್ಕೂ ಹೆಚ್ಚಿನ ಜನ ಹೆಸರು ನೋಂದಾಯಿಸಿಕೊಂಡಿದ್ದು, ಇವರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಸರಳ ವಿವಾಹ ಪ್ರೋತ್ಸಾಹಿಸುವ ದೃಷ್ಟಿಯಿಂದ ಸರಳ ವಿವಾಹಕ್ಕೆ ಮರುಳೇಶ್ವರ ಸೇವಾ ಭವನವನ್ನು ಉಚಿತವಾಗಿ ನೀಡಲಾಗುತ್ತದೆ. ಆಸಕ್ತ ವಧು-ವರರು ಮತ್ತು ಅವರ ಪೋಷಕರು ಸಮಾವೇಶದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು. ಹೆಚ್ಚಿನ ಮಾಹಿತಿಗೆ ಮೊ.ಸಂ.9483453005ಅನ್ನು ಸಂಪರ್ಕಿಸಲು ಕೋರಿದರು. ಗೋಷ್ಠಿಯಲ್ಲಿ ಸಂಯೋಜಕ ವೈ.ಆರ್.ವೆಂಕಟೇಶ್, ಸಂಚಾಲಕ ಜೆ.ನಾಗರಾಜು, ಪುಟ್ಟಸ್ವಾಮಿ ಸೇರಿದಂತೆ ಇತರರಿದ್ದರು.