ಜಿಲ್ಲೆ

ಮೈಸೂರಿನಲ್ಲಿ ಚಿರತೆ ಸೆರೆ

ಮೈಸೂರು: ಮೈಸೂರು ತಾಲೂಕಿನ ಇಲವಾಲದ ಬಳಿ ಗಂಡು ಚಿರತೆ ಸೆರೆ ಸಿಕ್ಕಿದೆ. ಆರ್‌ಎಂಪಿ ಬಳಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಆರ್‌ಎಂಪಿ ಸಿಬ್ಬಂದಿ ಚಿರತೆ ಸೆರೆ ಹಿಡಿಯುವಂತೆ ಕೋರಿದ್ದರು.

ಈ ನಿಟ್ಟಿನಲ್ಲಿ ಕಳೆದ ನಾಲ್ಕು ದಿನದ ಹಿಂದಷ್ಟೇ ಬೋನು ಇಡಲಾಗಿತ್ತು. ಬೋನಿನಲ್ಲಿದ್ದ ನಾಯಿಯನ್ನು ಬೇಟೆಯಾಡಲು ಬಂದು ಚಿರತೆ ಸೆರೆ ಸಿಕ್ಕಿದೆ. 4-5 ವರ್ಷದ ಗಂಡು ಚಿರತೆ ಆರೋಗ್ಯದಿಂದ ಕೂಡಿದೆ. ಎಸಿಎಫ್ ಲಕ್ಷ್ಮೀಕಾಂತ್ ಹಾಗೂ ಆರ್‌ಎಫ್‌ಒ ಸುರೇಂದ್ರ ಹಾಗೂ ಇನ್ನಿತರರು ಚಿರತೆಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದಾರೆ.