ಜಿಲ್ಲೆ

ಮೈಸೂರಿನಲ್ಲಿ ಚಂಪಕ ರಾಷ್ಟ್ರೀಯ ಕಲಾ ಉತ್ಸವ

ಮೈಸೂರು: ನಗರದ ಚಂಪಕ ಅಕಾಡೆಮಿಯಿಂದ ಅಧಿಕ ಶ್ರಾವಣ ಮಾಸದ ಅಂಗವಾಗಿ ಇತ್ತೀಚೆಗೆ ‘ಚಂಪಕ ರಾಷ್ಟ್ರೀಯ ಕಲಾ ಉತ್ಸವ’ ಆಯೋಜಿಸಲಾಗಿತ್ತು.
ರಾಮಕೃಷ್ಣನಗರದ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಚಿತ್ರಾಸ್ ಹಾಸ್ಪಿಟಲ್ ಸಂಸ್ಥಾಪಕ ಡಾ.ಮಹೇಶ್‌ಕುಮಾರ್ ಹಾಗೂ ಡಾ. ಚಿತ್ರಲೇಖಾ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ನೃತ್ಯದ ಪ್ರಭಾವವನ್ನು ತಿಳಿಸಿದರು.
ಚಂಪಕ ಅಕಾಡೆಮಿಯ ಸಹ ಸಂಸ್ಥಾಪಕರಾದ ನಾಗರಾಜನ್, ಶ್ರೀನಿವಾಸನ್ ಇತರರು ಇದ್ದರು. ಅಕಾಡೆಮಿಯ ಸಂಸ್ಥಾಪಕರಾದ ವಿದುಷಿ ನಾಗಲಕ್ಷ್ಮಿ ನಾಗರಾಜನ್ ಅವರ ಕಿರಿಯ ಶಿಷ್ಯ ವೃಂದ ಭರತನಾಟ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಿ ಸಭಿಕರ ಮನ ಸೆಳೆದರು. ಬೆಂಗಳೂರಿನ ಡಾ. ಮಾಲಿನಿ ರವಿಶಂಕರ್ ಅವರ ಶಿಷ್ಯೆ ಆರ್. ಲಾಸ್ಯಪ್ರಿಯಾ ಸಂಗೀತಗಾನ ನೃತ್ಯಯಾನ ಎಂಬ ಸಂಗೀತ ಕಛೇರಿಯ ಮಾರ್ಗವನ್ನು ಅನುಸರಿಸಿದ ಪ್ರಯೋಗಾತ್ಮಕ ನೃತ್ಯ ಪ್ರಸ್ತುತಿಯಿಂದ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಡಾ. ತುಳಸಿ ರಾಮಚಂದ್ರ ಅವರ ಶಿಷ್ಯವೃಂದ ಮಾಧುರ್ಯ ಮಾರ್ಗ ಎಂಬ ಕರ್ನಾಟಕ ಪರಂಪರೆಯ ನೃತ್ಯ ಪ್ರಸ್ತುತಪಡಿಸಿದರು.