ಚಿಕ್ಕಮಗಳೂರು: ಮೈಲಿಮನೆ ಗ್ರಾಪಂ ನೂತನ ಅಧ್ಯಕ್ಷರಾಗಿ ರಮ್ಯ ಪೂರ್ಣೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ರಮ್ಯಾ ಹೊರತುಪಡಿಸಿ ಬೇರೆ ಯಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿ ಎಚ್.ಡಿ.ರೇವಣ್ಣ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್, ಪ್ರಪಂಚದಲ್ಲೇ ಅತೀ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಭಾರತ. ಈ ಸಂವಿಧಾನದಡಿ ಎಲ್ಲರೂ ಹೇಗೆ ಕೂಡಿ ಬಾಳಬೇಕೆಂಬ ಬಗ್ಗೆ ಅಧಿಕಾರ ವಿಕೇಂದ್ರೀಕರ ವ್ಯವಸ್ಥೆಯನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಾರಿಮಾಡಿದ್ದಾರೆ ಎಂದು ಹೇಳಿದರು.
ಇಂದು ಅದರ ಭಾಗವಾಗಿ ಎಲ್ಲರೂ ಅಧಿಕಾರ ಅನುಭವಿಸುತ್ತಿz್ದೆÃವೆ. ಮೈಲಿಮನೆ ಗ್ರಾಮ ಪಂಚಾಯಿತಿಗೆ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ರಮ್ಯ ಪೂರ್ಣೇಶ್ ಆಯ್ಕೆಯಾಗಿದ್ದಾರೆ. ಅಧಿಕಾರ ಸಿಕ್ಕಿದ ಈ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಮುಂದಿನ ಪೀಳಿಗೆ ನಿಮ್ಮನ್ನು ಗುರ್ತಿಸುವ ನಿಟ್ಟಿನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿಯ ಎಲ್ಲಾ ಸದಸ್ಯರ ಬೆಂಬಲದೊAದಿಗೆ ಅಭಿವೃದ್ಧಿ ಸಾಧಿಸಿ ಮುಂದಿನ ಅಧ್ಯಕ್ಷರಿಗೆ ಮಾದರಿಯಾಗಿ, ಮಾರ್ಗದರ್ಶಕರಾಗಿ ಎಂದು ಹಾರೈಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಬಡ ಜನರು ವಾಸಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಇದು ಕಾರ್ಯರೂಪಕ್ಕೆ ಬಂದಾಗ ಜನ ನಿಮ್ಮನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಿರುವುದು ರಮ್ಯ ಪೂರ್ಣೇಶ್‌ರವರ ಜನಪ್ರಿಯತೆಗೆ ಸಾಕ್ಷಿ ಎಂದು ಹೇಳಿದರು.
ಜನಸೇವೆಗೆ ಗ್ರಾಪಂ ಅಧಿಕಾರ ಮುಖ್ಯ. ಅದಕ್ಕೆ ಪೂರಕವಾಗಿ ಸರ್ಕಾರ ಅಭಿವೃದ್ಧಿಗೆ ಸಹಕಾರ ನೀಡಬೇಕು. ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಮತ್ತು ಮನೆಗಳ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಕ್ರಿಯಾಯೋಜನೆ ತಯಾರಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿಪಡಿಸಲು ಸಲಹೆ ನೀಡಿದರು.
ನೂತನ ಅಧ್ಯಕ್ಷೆ ರಮ್ಯ ಪೂರ್ಣೇಶ್ ಮಾತನಾಡಿ, ಗ್ರಾಮದ ಮುಖಂಡರಿಗೆ ಹಾಗೂ ಪಂಚಾಯಿತಿ ಸದಸ್ಯರಿಗೆ ನನ್ನನ್ನು ಆಯ್ಕೆಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದರು.
ಸರ್ಕಾರದಿAದ ಅನುದಾನ ತಂದು ತಮ್ಮ ಅಧಿಕಾರವಧಿಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಮನೆ ವಿತರಣೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದ ಅವರು, ಈ ಪಂಚಾಯಿತಿಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ.ಮಂಜುನಾಥ್, ತಾಪಂ ಮಾಜಿ ಸದಸ್ಯೆ ಅರ್ಪಿತ ಪ್ರದೀಪ್, ಮಾಜಿ ಅಧ್ಯಕ್ಷ ಚೇತನ್, ಸಮಾಜ ಸೇವಕ ಮೈಲಿಮನೆ ಪೂರ್ಣೇಶ್, ಗ್ರಾಮಸ್ಥರಾದ ಜಯಚಂದ್ರ ರುದ್ರೇಗೌಡ, ಸಿದ್ಧಯ್ಯ, ಕಿಶನ್, ರತೀಶ್‌ಕುಮಾರ್, ಟಿ.ಡಿ.ಮಲ್ಲೇಶ್, ಶ್ಯಾಮ್, ವಿಕ್ರಾಂತ್, ರಾಜೇಂದ್ರ, ನಿರಂಜನ್, ಚಂದನ್ ಗೌಡ, ರವಿ ಬಸರವಳ್ಳಿ, ಗೋಪಾಲ್ ಗೌಡ, ಸೋಮೇಶ್, ಪ್ರದೀಪ್.ಬಿ.ಆರ್.ಸತೀಶ್, ಗ್ರಾಪಂ ಉಪಾಧ್ಯಕ್ಷೆ ವಿಂದ್ಯಾ, ಸದಸ್ಯರಾದ ಹೇಮಾವತಿ, ಚೇತನ್‌ಗೌಡ ಮತ್ತಿತರರಿದ್ದರು.