ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬೆಂಗಳೂರು ಬಿಡದಿಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಕಂಸಾಳೆ ಭಕ್ತಿ ನೃತ್ಯ ಪ್ರದರ್ಶನ ಗಮನ ಸೆಳೆಯಿತು. 
ಜಿಲ್ಲೆ

ಮೈನೆವರೇಳಿಸಿದ ಕಂಸಾಳೆ ನೃತ್ಯ ಪ್ರದರ್ಶನ

ಬಾಗಲಕೋಟೆ: ದಕ್ಷಿಣ ಕರ್ನಾಟಕದ ಪ್ರಮುಖ ಜಾನಪದ ಕಲೆಗಳಲ್ಲಿ ಒಂದಾದ ಕಂಸಾಳೆ ಭಕ್ತಿ ನೃತ್ಯವನ್ನು ಬೆಂಗಳೂರು ಬಿಡದಿಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಪ್ರದರ್ಶನ ಮಾಡಲಾಯಿತು.

ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ನಡೆದ ನೃತ್ಯ ಪ್ರದರ್ಶನ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು. ಹಾಡುತ್ತ ಭಾವಾವೇಶದಿಂದ ನೃತ್ಯ ಮಾಡುವ ಮಲೆ ಮಾದೇಶ್ವರನನ್ನು ಆರಾಽಸುವ ಮತ್ತು ಪೂಜಿಸುವ ಜಾನಪದ ಕಲೆಗೆ ನೆರೆದವರು ನಿಬ್ಬೆರಗಾದರು.

ನೃತ್ಯ ಪ್ರದರ್ಶನದಲ್ಲಿ ವಿದ್ಯಾರ್ಥಿನಿಯರುಗಳಾದ ಸೌಂದರ್ಯ. ಶಿಂಧು, ಹರ್ಷಿತಾ, ಸೃಜನಾ, ಅಮೃತಾ, ಅನುಶಾ, ಪೂರ್ಣಿಮಾ ಮತ್ತು ಮಾನಸಾ ಹೆಜ್ಜೆ ಹಾಕಿದರು. ಮೈಸೂರು ಗಂಗುಬಾಯಿ ಹಾನಗಲ್ ವಿವಿ ಪ್ರಾಧ್ಯಾಪಕ ವಿಶ್ವನಾಥ ನೃತ್ಯ ನಿರ್ದೇಶನ ಮಾಡಿದರು. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಬಡಿಗೇರ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಸವೇಶ್ವರ ಪದವಿ ಕಾಲೇಜಿನ ನಿರ್ದೇಶಕ ಡಾ.ವಿ.ಎಸ್.ಕಟಗಿಹಳ್ಳಿಮಠ, ಪ್ರಾಚಾರ್ಯರ ಎಸ್.ಜೆ ಒಡೆಯರ, ಡಾ.ಎಸ್.ಎಂ.ಗಾಂವಕರ, ಡಾ.ಜೆ.ಬಿ ಚವ್ಹಾಣ ಸೇರಿದಂತೆ ವಿವಿಧ ಕಾಲೇಜುಗಳು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.