ಜಿಲ್ಲೆ

ಮೈನಿಂಗ್ ಕಂಪನಿ ವಿರುದ್ಧ ಮುಷ್ಕರ ಹಿಂಪಡೆದಿದ್ದೇವೆ

ಚಿತ್ರದುರ್ಗ: ವೇದಾಂತ ಮೈನಿಂಗ್ ಕಂಪನಿಯೂ ಸ್ಥಳೀಯರಿಗೆ ಉದ್ಯೋಗ ನೀಡುವುದು ಸೇರಿ ನಾಲ್ಕು ಬೇಡಿಕೆ ಈಡೇರಿಸುವ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ರಮೇಶ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40:60 ಅನುಪಾತದಡಿ ಗೇಟ್-3 ರೋಡ್ ಓಪನ್ ಮಾಡಿ ಲಾರಿಗಳಲ್ಲಿ ಅದಿರು ಸಾಗಾಣಿಕೆಗೆ ನಮಗೆ ಅವಕಾಶ ನೀಡಲು 2 ತಿಂಗಳ ಕಾಲಾವಕಾಶ ಕಂಪನಿಯ ಅಧಿಕಾರಿಗಳು ಕೇಳಿದ್ದಾರೆ. ಅಲ್ಲದೆ, ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ, ಪರಿಸರ ಪುನಶ್ಚೇತನದ ಭರವಸೆ ಕಾರಣಕ್ಕೆ ಡಿ. 8ರ ರಾತ್ರಿಯಿಂದಲೇ ಮುಷ್ಕರ ಹಿಂಪಡೆದಿದ್ದೇವೆ ಎಂದರು.

ವಿವಿಧ ಸಂಘ-ಸಂಸ್ಥೆಗಳ ಮುಖಂಡರಾದ ಶ್ರೀರಾಮ್, ಸಿರಾಜ್, ಎಚ್.ಎಂ.ಮಂಜುನಾಥ್, ಇಮ್ರಾನ್, ಶಿವರಾಜ್, ಅನೀಸ್, ವಿಜಯಕುಮಾರ್, ನಾಗರಾಜ್, ವಸೀಂ, ಪ್ರಕಾಶ್ ರಾಮನಾಯ್ಕ ಇತರರಿದ್ದರು.