ಜಿಲ್ಲೆ

ಮೈತ್ರಿ ವಿಚಾರ ಗೊತ್ತಿಲ್ಲ, ದೇವೇಗೌಡ ನಿರ್ಧಾರಕ್ಕೆ ಬದ್ಧ

ಹಾಸನ: ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ, ದೇವೇಗೌಡರು, ಕುಮಾರಸ್ವಾಮಿ ಕುಳಿತುಕೊಂಡು ನಿರ್ಣಯ ಮಾಡುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ. ರಾಜಕೀಯದಲ್ಲಿ ಇರುವವರೆಗೂ ದೇವೇಗೌಡರು ಏನು ಹೇಳುತ್ತಾರೆ ಬದ್ಧನಾಗಿದ್ದೇನೆ. ರೇವಣ್ಣ-ಕುಮಾರಸ್ವಾಮಿ ಹೊಡೆದಾಡುತ್ತಾರೆ ಎಂದು ಯಾರಾದರೂ ತಿಳಿದುಕೊಂಡಿದ್ದರೆ ಅವರಿಗೆ ಭ್ರಮನಿರಸನವಾಗುತ್ತದೆ ಎಂದರು.

ನಾವು ಯಾವತ್ತೂ ಒಟ್ಟಿಗೆ ಒಂದೇ ನಿರ್ಣಯ ತೆಗೆದುಕೊಳ್ಳುತ್ತೇವೆ. ಕುಮಾರಸ್ವಾಮಿ ಬಿಟ್ಟು ನಾವೇನು ಮಾಡಲು ಹೋಗಲ್ಲ. ಎಲ್ಲರೂ ಒಟ್ಟಾಗಿ ರಾಜ್ಯದ ಜನರಿಗೆ ಒಳ್ಳೆಯದಾಗಬೇಕು ಎಂಬ ರೀತಿಯ ನಿರ್ಣಯ ತೆಗೆದುಕೊಳ್ಳುತ್ತೇವೆ. ಒಮ್ಮೆ ಕೋಮುವಾದಿ ಅನ್ನೋದು, ಇನ್ನೋಂದು ಸಾರಿ ಬಂದು ತಬ್ಬಿಕೊಳ್ಳೋದು, ಎ ಟೀಂ, ಬಿ ಟೀಂ ಎಂಬುದು ನಮ್ಮ ಬಳಿಯಿಲ್ಲ. ನಮ್ಮದು ಒಂದೇ ನಿರ್ಣಯ, ದೇವೇಗೌಡರು ಉಳಿಸಿಕೊಂಡು ಬಂದಿದ್ದಾರೆ ಎಂದರು.

ಹಿಂದೆ ಎ ಟೀಂ, ಬಿ ಟೀಂ ಎಂದವರದ್ದು ಏನಾಯಿತು? ಕಾಂಗ್ರೆಸ್‌ನವರು ನಮ್ಮ ಮನೆ ಬಾಗಿಲಿಗೆ ಬಂದು ಕಾಲು ಕಟ್ಟಲಿಲ್ಲವಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಈಗ ಅಧಿಕಾರಿಕ್ಕೆ ಬಂದಿದೆ, ಅವರಿಗೆ ಒಳ್ಳೆಯದಾಗಲಿ. ಐದು ಗ್ಯಾರಂಟಿ ಕೊಟ್ಟಿದ್ದಾರೆ, ಆರನೇಯದ್ದು ಕೊಬ್ಬರಿದು ಒಂದು ಕೊಡಿ ಕೇಳಿಕೊಂಡಿದ್ದೇವೆ. ಸರ್ಕಾರ ಬಂದ ಐದು ನಿಮಿಷದಲ್ಲಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ಮಾತ್ತೇವೆ ಎಂದು ಹೇಳಿದ್ದರು, ಅದೇ ರೀತಿ 15 ಸಾವಿರ ಮಾಡಿ ಜನರನ್ನು ಇನ್ನಷ್ಟು ಆಕರ್ಷಣೆ ಮಾಡಲಿ ಎಂದು ಹೇಳಿದರು.