ಚಾಮರಾಜನಗರ: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಲು ತೀರ್ಮಾನಿಸಿರುವ ಮೈಕ್ರೋ ೈನಾನ್ಸ್‌ಗಳ ವಿರುದ್ಧ ಸವಾಲುಗಳ ನಡುವೆಯೂ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿದ್ದೇ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಶಿಷ್ಯ.
ತಾಲೂಕಿನ ಹೆಗ್ಗವಾಡಿಪುರ ಗ್ರಾಮದ ರೈತ ಮುಖಂಡ ಮಹೇಶ್‌ಕುಮಾರ್ ಮೈಕ್ರೋ ೈನಾನ್ಸ್‌ಗಳು ಸಾಲ ವಸೂಲಾತಿ ವೇಳೆ ಸಾಲಗಾರರಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಗುಡುಗಿದವರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪ್ರೇರಣೆಯಿಂದ ರೈತ ಚಳವಳಿಗೆ ಧುಮುಕಿದ ಮಹೇಶ್‌ಕುಮಾರ್, ಹಲವು ಹೋರಾಟಗಳಲ್ಲಿ ಭಾಗವಹಿಸಿ 26 ವರ್ಷಗಳಿಂದ ಜನಪರ ಧ್ವನಿಯಾಗಿದ್ದಾರೆ. ಎರಡು ತಿಂಗಳ ಹಿಂದೆ ಮಹೇಶ್‌ಕುಮಾರ್ ಅವರ ಗ್ರಾಮದಲ್ಲಿ ಕುಟುಂಬದ ಮನೆ ಬಳಿಗೆ ರಾತ್ರಿ ವೇಳೆ ಬಂದ ಮೈಕ್ರೋ ೈನಾನ್ಸ್ ಕಂಪನಿಯ ಸಿಬ್ಬಂದಿ ಸಾಲ ಮರು ಪಾವತಿಗೆ ಕಿರುಕುಳ ನೀಡುತ್ತಿದ್ದ.
ನೊಂದ ಕುಟುಂಬ ಮಹೇಶ್‌ಕುಮಾರ್ ಬಳಿ ಅಳಲು ತೋಡಿಕೊಂಡಿದ್ದರು. ಸ್ಥಳಕ್ಕೆ ತೆರಳಿದ ಸಿಬ್ಬಂದಿಯ ದೌರ್ಜನ್ಯದ ಅರಿವಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಗೀಡಾ ಹುಡೇದ ಅವರಿಗೆ ಕರೆಮಾಡಿ ಮಾತನಾಡಲು ೆನ್ ಕೊಟ್ಟರೂ ಸಿಬ್ಬಂದಿ ಸ್ಪಂದಿಸಿಲ್ಲ. ಈಗಲೇ ಸಾಲ ಮರು ಪಾವತಿ ಮಾಡಬೇಕು. ಕಾಲಾವಕಾಶ ಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದ. ಆಗ ಮಹೇಶ್‌ಕುಮಾರ್ ಸ್ಥಳಕ್ಕೆ ರೈತ ಮುಖಂಡರನ್ನು ಕರೆಸಿಕೊಳ್ಳುತ್ತಿದ್ದಂತೆಯೇ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದ.
ಬಳಿಕ ಮೈಕ್ರೋ ೈನಾನ್ಸ್‌ಗಳು ನೀಡುತ್ತಿರುವ ಕಿರುಕುಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಮನಕ್ಕೆ ತಂದರು. ಮಾಧ್ಯಮಗಳ ಗಮನ ಸೆಳೆದು ಎಲ್ಲರಿಗೂ ಈ ವಿಷಯ ಗೊತ್ತಾಗುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ಅಕ್ಕ-ಪಕ್ಕದ ಊರು, ಜಿಲ್ಲೆಗಳಲ್ಲೂ ಮೈಕ್ರೋ ೈನಾನ್ಸ್‌ಗಳ ಕಿರುಕುಳ ದೊಡ್ಡ ಸದ್ದು ಮಾಡಲು ಆರಂಭವಾಯಿತು. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಲು ತೀರ್ಮಾನ ಮಾಡುವ ಹಂತಕ್ಕೆ ಬಂದಿತು.
ಗ್ರಾಮದಲ್ಲೇ ಎದುರಾಗಿತ್ತು ವಿರೋಧ
ಮೈಕ್ರೋ ೈನಾನ್ಸ್‌ಗಳ ವಿರುದ್ಧದ ಹೋರಾಟದಲ್ಲಿ ಮಹೇಶ್‌ಕುಮಾರ್ ಸ್ವಗ್ರಾಮದಲ್ಲೇ ಕೆಲವರಿಂದ ವಿರೋಧ ಎದುರಿಸಬೇಕಾಯಿತು. ಊರಲ್ಲಿ ಒಂದೆರಡು ಕುಟುಂಬಗಳು ಸಾಲ ಮಾಡಿ ಮನೆ ಬಿಟ್ಟು ಹೋಗಿದ್ದರು. ಆದರೆ ಇಡೀ ಊರಿಗೆ ಊರಿನ ಜನರೇ ಸಾಲ ಮಾಡಿ ಮನೆ ಖಾಲಿ ಮಾಡಿದ್ದಾರೆ ಎಂಬುದು ಎಲ್ಲೆಡೆ ಹಬ್ಬಿಬಿಟ್ಟಿತು. ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಸಾಲ ಮಾಡಿ ಮನೆ ಬಿಟ್ಟಿದ್ದವರ ಪರವಾಗಿ ಮಾತನಾಡುತ್ತಿದ್ದ ಮಹೇಶ್‌ಕುಮಾರ್ ಮೇಲೆ ಗ್ರಾಮದ ಕೆಲವರು ಅಸಮಾಧಾನಗೊಂಡರು. ಊರಲ್ಲಿ ಎಲ್ಲರೂ ಸಾಲ ಮಾಡಿ ಓಡಿ ಹೋಗಿದ್ದಾರೆ ಎಂಬ ಅಪಪ್ರಚಾರದಿಂದ ಗ್ರಾಮದ ಮರ್ಯಾದೆ ಹಾಳಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಕುಗ್ಗದ ಮಹೇಶ್‌ಕುಮಾರ್ ಮೈಕ್ರೋ ೈನಾನ್ಸ್‌ಗಳ ವಿರುದ್ಧ ಹೋರಾಟ ಮುಂದುವರಿಸಿದರು.
ರೈತ ಮುಖಂಡರಿಂದ ಸನ್ಮಾನ ಮೈಕ್ರೋ ೈನಾನ್ಸ್‌ಗಳ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್‌ಕುಮಾರ್‌ಗೆ ರೈತ ಸಂಘದಿಂದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಚಿತ್ರವಿರುವ ಪದಕವನ್ನು ಕೊರಳಿಗೆ ಹಾಕಿ ಸನ್ಮಾನ ಮಾಡಲಾಗಿದೆ. ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ.18ರಂದು ರೈತ ಸಂಘದ ರಾಜ್ಯ ಕಾಯಾಧ್ಯಕ್ಷ ಮಹೇಶ್‌ಕುಮಾರ್, ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಇದ್ದರು.
ಮೈಕ್ರೋ ೈನಾನ್ಸ್‌ಗಳ ವಿರುದ್ಧದ ಹೋರಾಟ ಈಗ ಒಂದು ಹಂತಕ್ಕೆ ಬಂದಿದೆ. ಆದರೂ ಪರಿಪೂರ್ಣವಾಗಿ ಕಡಿವಾಣ ಬೀಳಬೇಕಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಕಿರು ಸಾಲ ಕೊಡದೆ ಇರುವುದರಿಂದಲೇ ಮೈಕ್ರೋ ೈನಾನ್ಸ್‌ಗಳ ಹಾವಳಿ ಹೆಚ್ಚಾಗಿರೋದು. ಇವುಗಳ ವಿರುದ್ಧ ಜ.29ರಂದು ಬೆಂಗಳೂರಿನಲ್ಲಿರುವ ರಿಸರ್ವ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಮೈಕ್ರೋ ೈನಾನ್ಸ್‌ಗಳಿಂದ ಕಿರುಕುಳಕ್ಕೆ ಒಳಗಾಗಿರುವವರು ಧರಣಿಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಮಹೇಶ್‌ಕುಮಾರ್, ರೈತ ಮುಖಂಡ ಹೆಗ್ಗವಾಡಿಪುರ, ಚಾಮರಾಜನಗರ