ಜಿಲ್ಲೆ

ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಹೋರಾಟ

ಚಾಮರಾಜನಗರ: ಮೈಕ್ರೋ ಫೈನಾನ್ಸ್‌ಗಳ ಹಾವಳಿ, ಕಿರುಕುಳ ತಡೆಗಟ್ಟಲು ಆಗ್ರಹಿಸಿ ರಾಜ್ಯ ರೈತ ಸಂಘ ಹೋರಾಟಕ್ಕಿಳಿಯುತ್ತಿದೆ.

ಬೆಂಗಳೂರಿನಲ್ಲಿರುವ ರಿಸರ್ವ್ ಬ್ಯಾಂಕ್ ಎದುರು ಜ.29ರಂದು ಬೆಳಗ್ಗೆ 11 ಗಂಟೆಗೆ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ರೈತರು, ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಷೇರುದಾರರು ಧರಣಿಯಲ್ಲಿ ಭಾಗವಹಿಸಬೇಕೆಂದು ಕರೆ ಕೊಟ್ಟಿದೆ.

ಈ ಹೋರಾಟಕ್ಕೆ ಮೊದಲು ಕಾರಣವಾಗಿದ್ದೇ ಗಡಿಜಿಲ್ಲೆ ಚಾಮರಾಜನಗರ. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮೈಕ್ರೋ ೈನಾನ್ಸ್‌ಗಳಿಂದ ಸಾಲ ಪಡೆದಿದ್ದ ಕುಟುಂಬ ಮರುಪಾವತಿ ಮಾಡಲಾಗದೆ ಊರು ತೊರೆದಿದ್ದವು. ಈ ಕುರಿತು ರೈತ ಮುಖಂಡ ಹೆಗ್ಗವಾಡಿಪುರದ ಮಹೇಶ್‌ಕುಮಾರ್ ಧ್ವನಿ ಎತ್ತಿದ್ದರು. ನಂತರದ ದಿನಗಳಲ್ಲಿ ಮೈಸೂರಿನ ನಂಜನಗೂಡು, ರಾಮನಗರ ಮತ್ತು ಇತರ ಜಿಲ್ಲೆಗಳಲ್ಲಿ ಸಾಲಗಾರರು ಊರು ಬಿಟ್ಟಿರುವುದು ಬೆಳಕಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಮೈಕ್ರೋ ೈನಾನ್ಸ್‌ಗಳ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿಸಿ ರೈತ ಸಂಘ ಹೋರಾಟಕ್ಕಿಳಿಯುತ್ತಿದೆ.

ಹೊರಜಿಲ್ಲೆಗಳಿಂದಲೂ ಸಹಾಯಕ್ಕೆ ಮೊರೆ

ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ಸಾಲ ವಸೂಲಾತಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ೈನಾನ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ಮೇರೆಗೆ ಸಹಾಯವಾಣಿ ತೆರೆಯಲಾಗಿದೆ.

ಈ ದೂರವಾಣಿಗೆ ಚಾಮರಾಜನಗರ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಸಾಲಗಾರರು ಕರೆ ಮಾಡಿ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂಗೆ ಗುಂಡ್ಲುಪೇಟೆ-28, ಚಾಮರಾಜನಗರ-22, ಕೊಳ್ಳೇಗಾಲ 10, ಹನೂರು-3, ಯಳಂದೂರು-3 ದೂರುಗಳು ಬಂದಿವೆ. ಇದಲ್ಲದೇ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಹಾಸನ, ರಾಯಚೂರು ಇನ್ನಿತರ ಜಿಲ್ಲೆಗಳಿಂದಲೂ ಕರೆಗಳು ಬಂದಿವೆ.

ಡಿಸಿ ಶಿಲ್ಪಾನಾಗ್ ಸೂಚನೆ ಮೇರೆಗೆ ಕಂಟ್ರೋಲ್ ರೂಂ ತೆರೆದಿರುವ ಸುದ್ದಿ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಗೂ ತಲುಪಿದೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಒಬ್ಬರಿಂದ ಮತ್ತೊಬ್ಬರಿಗೆ ಸಹಾಯವಾಣಿ ಸಂಖ್ಯೆ ಶೇರ್ ಆಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಕಂಟ್ರೋಲ್ ರೂಂಗೆ ಹೊರಜಿಲ್ಲೆಗಳಿಂದಲೂ ೆನ್ ಕರೆಗಳು ಬರುತ್ತಿವೆ.

ಲಿಖಿತ ದೂರು ನೀಡಲು ಹಿಂದೇಟು ಸಹಾಯವಾಣಿಗೆ ದೂರುಗಳ ಸುರಿಮಳೆಯೇ ಬಂದಿದ್ದರೂ ಸಾಲಗಾರರು ಪೊಲೀಸ್ ಠಾಣೆಗೆ ಆಗಮಿಸಿ ಲಿಖಿತವಾಗಿ ದೂರು ಕೊಡಲು ಮುಂದೆ ಬರುತ್ತಿಲ್ಲ. ಊರು ಬಿಟ್ಟು ಹೋಗಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ೆನ್ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ೆನ್ ಸಂಪರ್ಕಕ್ಕೆ ಸಿಕ್ಕಿದವರು ತಮ್ಮ ಬಗ್ಗೆ ಮಾಹಿತಿ ಗೊತ್ತಾಗುತ್ತದೆ ಎನ್ನುವ ಕಾರಣಕ್ಕೆ ಮಾತನಾಡಲು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಸಾಲಗಾರರೊಬ್ಬರು ಮೈಕ್ರೋ ೈನಾನ್ಸ್ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲೆ ವ್ಯಾಪ್ತಿಯ ಪೊಲೀಸ್ ಠಾಣೆಯೊಂದಕ್ಕೆ ದೂರು ನೀಡಲು ಮುಂದಾಗಿದ್ದರು. ಇದನ್ನು ಬಿಟ್ಟರೆ ಬೇರೆ ದೂರುಗಳು ದಾಖಲಾಗಿರುವುದು ಬೆಳಕಿಗೆ ಬಂದಿಲ್ಲ. ಒಂದು ತಿಂಗಳ ಹಿಂದೆ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ನಿವಾಸಿ ಶಾಂತಿ(45) ಆತ್ಮಹತ್ಯೆ ಮಾಡಿಕೊಂಡರು. ಈ ಕುರಿತು ಗ್ರಾಮಸ್ಥ ಕುಮಾರ್ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಖಾಸಗಿ ೈನಾನ್ಸ್‌ನವರು ಸಾಲ ಮರು ಪಾವತಿ ಮಾಡಲು ಪಟ್ಟು ಹಿಡಿದಿದ್ದರು. ಹಣ ತರುತ್ತೇನೆ ಎಂದು ಹೇಳಿ ಹೋದ ಶಾಂತಿ ಮನೆಯಲ್ಲಿ ನೇಣುಬಿಗಿದುಕೊಂಡು ಮೃತಪಟ್ಟರು. ನಮ್ಮ ಗ್ರಾಮದಲ್ಲಿ ಇನ್ನೊಂದು ಕುಟುಂಬ ಸಾಲ ಮಾಡಿಕೊಂಡು ಊರು ಬಿಟ್ಟು ತಮಿಳುನಾಡಿಗೆ ಹೋಗಿದೆ ಎಂದಿದ್ದಾರೆ.

ಮೈಕ್ರೋ ೈನಾನ್ಸ್ ಹಾವಳಿ ಮತ್ತು ರೈತರ ಸಮಸ್ಯೆಗಳ ವಿರುದ್ಧ ಜ.29ರಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಕಿರುಕುಳಕ್ಕೆ ಒಳಗಾದವರು ಭಯ ಪಡದೆ ಧೈರ್ಯವಾಗಿ ನಮ್ಮೊಂದಿಗೆ ಚಳವಳಿಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಹೆಗ್ಗವಾಡಿಪುರ ಮಹೇಶ್‌ಕುಮಾರ್, ರೈತ ಮುಖಂಡ, ಚಾಮರಾಜನಗರ