ಜಿಲ್ಲೆ

ಮೈ ರಿಯಾಲ್ಟಿ ಪ್ರಾಪರ್ಟಿ ಎಕ್ಸ್‌ಪೋ ಸಂಪನ್ನ

ಮೈಸೂರು: ನಗರದ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಮೈ ರಿಯಾಲ್ಟಿ -2022’ ಮೆಗಾ ಪ್ರಾಪರ್ಟಿ ಎಕ್ಸ್‌ಪೋ ಸೋಮವಾರ ಯಶಸ್ವಿಯಾಗಿ ಸಂಪನ್ನವಾಯಿತು.
ಬಿಲ್ಡರ್ಸ್, ಡೆವಲಪರ್ಸ್ ಜತೆಗೆ ಜನತೆಯ ನಿರೀಕ್ಷೆಗಳನ್ನು ತಲುಪುವ ಮೂಲಕ ಮೈ ರಿಯಾಲ್ಟಿ ಎಕ್ಸ್‌ಪೋಗೆ ಉತ್ತಮ ಪ್ರತಿಕ್ರಿಯೆ ದೊರಕಿತು. ನಾಲ್ಕು ದಿನಗಳ ಈ ಮೇಳದಲ್ಲಿ 7 ರಿಂದ 8 ಸಾವಿರ ಜನರು ಭೇಟಿ ನೀಡಿದ್ದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಸೆಂಟರ್, ಕ್ರೆಡಾಯ್ ಸಂಸ್ಥೆಗಳು, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಈ ಮೇಳದಲ್ಲಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ಗಳು ತಾವು ಅಭಿವೃದ್ಧಿಪಡಿಸಿದ್ದ ವಿವಿಧ ಯೋಜನೆಗಳಾದ ಲೇಔಟ್, ಫ್ಲಾೃಟ್ಸ್, ಅಪಾರ್ಟ್‌ಮೆಂಟ್, ಗುಂಪು ಮನೆಗಳು, ವಿಲ್ಲಾಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಹಾಗೆ ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ ಬ್ಯಾಂಕ್‌ಗಳು ಹೋಮ್ ಲೋನ್ ಬಗ್ಗೆ ತಿಳಿಸಲು ಅವಕಾಶವಿತ್ತು.
ಮೈ ರಿಯಾಲ್ಟಿ ಎಕ್ಸ್‌ಪೋನಲ್ಲಿ ಬ್ರಿಗೇಡ್ ಎಂಟರ್‌ಪ್ರೈಸ್, ನಮ್ ಮನೆ ಪ್ಲಾಟಿನಂ ಸ್ಟಾಲ್‌ನಲ್ಲಿದ್ದರೆ, ಗೋಲ್ಡ್ ಸ್ಟಾಲ್‌ನಲ್ಲಿ ರೈ ಎಸ್ಟೇಟ್, ಈಗಲ್‌ಬಗ್, ಸ್ಕಿಲ್ ಟೆಕ್ ಇದ್ದವು. ಇನ್ನು ಸಿಲ್ವರ್ ಸ್ಟಾಲ್‌ನಲ್ಲಿ ಜಿ9 ಪ್ರಾಜೆಕ್ಟ್, ಭೀಮಾ ಪ್ರಾಪರ್ಟಿಸ್, ಜಿಎಸ್‌ಎಸ್ ಪ್ರಾಜೆಕ್ಟ್, ಅಹದ್ ಬಿಲ್ಡರ್ಸ್ ಸ್ಟಾಲ್‌ಗಳಿದ್ದವು.
ಮೈ ರಿಯಾಲ್ಟಿ-2022 ಒಂದೇ ಜಾಗದಲ್ಲಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ಸೈಟ್‌ಗಳು ಹಾಗೂ ಫ್ಲಾೃಟ್‌ಗಳು ಇದ್ದವು. ಪ್ರತಿಷ್ಠಿತ ಡೆವಲಪರ್ಸ್, ರೇರಾ ಕ್ಲಿಯರೆನ್ಸ್ ಆಗಿರುವ ಡೆವಲಪರ್ಸ್‌ಗಳು ಮಾತ್ರ ಭಾಗಿಯಾಗಿದ್ದರಿಂದ ಗ್ರಾಹಕರಿಗೆ ಯಾವುದೇ ಗೊಂದಲ ಇಲ್ಲದೆ ಖರೀದಿಗೆ ಅವಕಾಶ ದೊರೆಯಿತು.