ಚಾಮರಾಜನಗರ: ವಿದ್ಯುತ್ ಗುತ್ತಿಗೆದಾರರು ನಿಯಮವನ್ನು ಪಾಲಿಸಿ ಕಂಬಗಳನ್ನು ಅಳವಡಿಸುವುದಿಲ್ಲ. ಇದು ವಿದ್ಯುತ್ ಅವಘಡಗಳಿಗೆ ಕಾರಣವಾಗುತ್ತಿದೆ. ಆಗಾಗಿ ಇದರಲ್ಲಿ ಮೇಲಾಧಿಕಾರಿಗಳ ತಲೆದಂಡವಾಗಬೇಕು ಎಂದು ರೂತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು.
ವಿದ್ಯುತ್ ಅವಘಡಗಳಿಂದ ರೈತರಿಗೆ ಸಾವು-ನೋವು ಉಂಟಾದಾಗ, ತಳಮಟ್ಟದ ಲೈನ್‌ಮ್ಯಾನ್ ಮತ್ತು ಇನ್ನಿತರೆ ನೌಕರರನ್ನು ವಜಾ ಮಾಡಬಾರದು. ಬದಲಾಗಿ ಇಲಾಖೆಯ ಮೇಲಾಧಿಕಾರಿಗಳ ಮೇಲೆ ಕ್ರಮವಾಗಬೇಕು. ಆಗ ಮಾತ್ರ ಇಲಾಖೆಯಲ್ಲಿ ವಸ್ತುನಿಷ್ಠತೆ ತರಲು ಸಾಧ್ಯವಾಗುತ್ತದೆ. ಅವಘಡಗಳಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಬೇಕು.