ಜಿಲ್ಲೆ

ಮೇ22ರಂದು ಸಂಘದ ಕಟ್ಟಡಕ್ಕೆ ದಾನಿಗಳ ನಾಮಫಲಕ ಅಳವಡಿಕೆ

ಹಾಸನ: ಜಿಲ್ಲಾ ಒಕ್ಕಲಿಗರ ಸಂಘದ ಕಟ್ಟಡಕ್ಕೆ ಭೂಮಿ ದಾನ ಮಾಡಿದ ದಿ. ಎಂ.ಆರ್. ಪುಟ್ಟಸ್ವಾಮಿಯವರ ಅಭಿಮಾನಿ ಬಳಗದಿಂದ ಮೇ22ರಂದು ಸಂಘದ ಕಟ್ಟಡಕ್ಕೆ ದಾನಿಗಳ ನಾಮಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಮಾಜ ಸೇವಕ ಪ್ರವೀಣ್ ಗೌಡ ತಿಳಿಸಿದರು.
ಮೇ. 22ರಂದು ಜಿಲ್ಲಾಧಿಕಾರಿ ಕಚೇರಿ ಆವರಣದ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಹೂವಿನ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನಂತರ ಬಿ.ಎಂ ರಸ್ತೆಯ ಮೂಲಕ ಒಕ್ಕಲಿಗರ ಸಂಘದ ಕಟ್ಟಡದ ಬಳಿ ತೆರಳಿ ನಾಮಫಲಕವನ್ನು ಅಳವಡಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಲ್ಲಿ ಹೇಳಿದರು
ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು. ಈ ಹಿಂದೆ ಒಕ್ಕಲಿಗ ಸಮಾಜದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಲವಾರು ಕೊಡುಗೆಯನ್ನು ನೀಡಿರುವ ಪುಟ್ಟಸ್ವಾಮಯ್ಯ ಅವರನ್ನು ಸ್ಮರಿಸುವಂತೆ ಮತ್ತು ಅವರ ಪುತ್ಥಳಿಯನ್ನು ನಿರ್ಮಿಸುವಂತೆ ಸಂಘಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ ಆದರೆ ಇದುವರೆಗೂ ನಮ್ಮ ಮನವಿಗೆ ಸ್ಪಂದಿಸಿಲ್ಲ ದೂರಿದರು.
ಜಿಲ್ಲಾ ಒಕ್ಕಲಿಗರ ಸಂಘದ ಹಾಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಂಘಕ್ಕೆ ದಾನ ನೀಡಿರುವಂತಹವರನ್ನು ನೆನೆಯದೇ ಇರುವುದು ಮತ್ತು ಅವರ ಕುಟುಂಬವನ್ನು ಗೌರವಿಸುವ ಕೆಲಸವನ್ನು ಮಾಡುತ್ತಿಲ್ಲ. ಈ ಸಂಘಕ್ಕೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ನೀಡಿದ ಕುಟುಂಬವನ್ನ ಗೌರವಿಸದೆ ಇರುವುದು ನಿಜಕ್ಕೂ ಖಂಡನೀಯ ಎಂದು ಹೇಳಿದರು.