ಜಿಲ್ಲೆ

ಮೇ.5 ರಂದು ‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರ ತೆರೆಗೆ

ಚಾಮರಾಜನಗರ: ಹೊಳೆಮತ್ತಿ ನೇಚರ್ ೌಂಡೇಶನ್, ಇವನಾಸೆನ್ಸ್ ಸ್ಟುಡಿಯೋಸ್ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿರುವ ‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರ ಮೇ.5 ರಂದು ತೆರ ಕಾಣಲಿದೆ ಎಂದು ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ತಿಳಿಸಿದರು.

ನಗರದ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರದಲ್ಲಿ ಕನ್ನಡ ಆವೃತ್ತಿಯ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಜಿಲ್ಲಾಕಾರಿ ಶಿಲ್ಪಾನಾಗ್, ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಕಾವೇರಿ ವನ್ಯಜೀವಿಧಾಮ ಮತ್ತು ಮಲೈ ಮಹದೇಶ್ವರಸ್ವಾಮಿ ವನ್ಯಜೀವಿ ಧಾಮದಲ್ಲಿ ಕಾವೇರಿ ನದಿಯ ನೀರನ್ನು ಅವಲಂಬಿಸಿರುವ ಅನೇಕ ವನ್ಯಜೀವಿಗಳ ಕಥೆಗಳನ್ನು ಹಾಗೂ ಸಂಕೀರ್ಣ ಸಂವಹನವನ್ನು ಅತ್ಯದ್ಭುತವಾಗಿ ತೋರಿಸಲಾಗಿದೆ. ಈ ಪ್ರದರ್ಶನ ಸಂಪೂರ್ಣ ಉಚಿತವಾಗಿದ್ದು, ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಗಮನಸೆಳೆಯುವುದು ಮತ್ತು ಒಣ ಆವಾಸಸ್ಥಾನಗಳ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇವನಾಸೆನ್ಸ್ ಸ್ಟುಡಿಯೋಸ್ ಸರವಣ ಕುಮಾರ್ ‘ಜೀವನದಿ ಸಾಕ್ಷ್ಯಚಿತ್ರ’ದ ನಿರ್ದೇಶನ ಮಾಡಿದ್ದು, ಖ್ಯಾತ ಚಲನಚಿತ್ರ ಕಲಾವಿದ ಎಚ್.ಜಿ.ದತ್ತಾತ್ರೇಯ (ದತ್ತಣ್ಣ) ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅರಣ್ ಸುರಾಧ ಸಂಗೀತ ನೀಡಿದ್ದು, ಬೆನ್ ಸರತ್ ಸಂಕಲನವಿದೆ. ಶ್ರೀಪದ್ ಶ್ರೀಧರ್ ಮತ್ತು ಅರವಿಂದ್ ಮೋಹನರಾಜ್ ಛಾಯಾಗ್ರಹಣವಿದ್ದು, ಸಂದೇಶ್ ಅಪ್ಪು ನಾಯ್ಕ ಮತ್ತು ಜ್ಞಾನೇಂದ್ರ ಚಿತ್ರೀಕರಣಕ್ಕೆ ಸಹಾಯ ಮಾಡಿದ್ದಾರೆ. ಸುಮಾರು 58 ನಿಮಿಷವಿರುವ ಸಾಕ್ಷ್ಯಚಿತ್ರವನ್ನು 4 ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರವನ್ನು ಮಲೈ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮಗಳ ಆಸುಪಾಸಿನ ಶಾಲಾ-ಕಾಲೇಜುಗಳು, ಹಳ್ಳಿಗಳಲ್ಲಿ ಪ್ರದರ್ಶನ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.