ಎನ್.ಆರ್.ಪುರ: ಮೆಣಸೂರು ಗ್ರಾಪಂ ಅಧ್ಯಕ್ಷರಾಗಿ ಗುರುವಾರ ರಚಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಬಿಇಒ ಕೆ.ಆರ್.ಪುಷ್ಪಾ ಕಾರ್ಯನಿರ್ವಹಿಸಿದರು.
ಅಭಿನಂದನಾ ಸಭೆಯಲ್ಲಿ ತಾಲೂಕು ಬಿಜೆಪಿ ವಕ್ತಾರ ಎನ್.ಎಂ.ಕಾಂತರಾಜ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗೇರ್‌ಬೈಲ್ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗುತ್ತದೆ. ಮೂಲಭೂತ ಸೌಕರ್ಯಗಳೆಲ್ಲವೂ ಮೆಣಸೂರು ಗ್ರಾಪಂನಿಂದ ನೀಡಲಾಗುತ್ತಿದೆ. ಆದರೆ ಮತದಾನದ ಹಕ್ಕು ಮಾತ್ರ ಕಡಹಿನಬೈಲು ಗ್ರಾಪಂಗೆ ಸೇರುತ್ತದೆ. ಇದರಿಂದ ಮೆಣಸೂರು ಗ್ರಾಪಂಗೆ ಹೊರೆಯಾಗಲಿದೆ. ಆದ್ದರಿಂದ ಗೇರ್‌ಬೈಲ್ ಗ್ರಾಮವನ್ನು ಮೆಣಸೂರು ಗ್ರಾಪಂ ವ್ಯಾಪ್ತಿಗೆ ತರುವಂತಾಗಬೇಕು ಎಂದರು.
ಬಿಜೆಪಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಶ್ಮಿ ದಯಾನಂದ್ ಮಾತನಾಡಿ, ಗ್ರಾಪಂನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರೂ ಮಹಿಳೆಯರೇ ಆಗಿದ್ದಾರೆ. ಪಕ್ಷ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷೆ ಪಚ್ಚೆಯಮ್ಮ, ಪಿಡಿಒ ಸಂತೋಷ್‌ಕುಮಾರ್, ಕಾರ್ಯದರ್ಶಿ ಪ್ರಸನ್ನಕುಮಾರ್‌ನಾಯ್ಕ, ಸಿಬ್ಬಂದಿ, ಡಿ.ಆರ್.ಶ್ರೀನಾಥ್, ಎನ್.ಡಿ.ಪ್ರಸಾದ್, ಅಣ್ಣಪ್ಪ, ಎಂ.ಟಿ.ಪ್ರವೀಣ್, ಬಿನು, ಶಿಲ್ಪಾ, ಉಮಾ ಗಂಗಾಧರ್, ಯಾಸ್ಮೀನ್, ಕೆ.ಎಂ.ಜಗದೀಶ್, ಅನಿಲ್, ಮೂಡಬಾಗಿಲುಚಂದ್ರು ಇದ್ದರು.