ಚಿತ್ರದುರ್ಗ: ನಗರದ ಹೊರವಲಯ ಜಿಆರ್‌ಹಳ್ಳಿ ದಾವಣಗೆರೆ ವಿವಿ ಸ್ನಾತಕೋತ್ತರ ಕೇಂದ್ರ ಕಟ್ಟಡ ಜ್ಞಾನಗಂಗೋತ್ರಿಯಲ್ಲಿ ತಾತ್ಕಾಲಿಕವಾಗಿ ಸರ್ಕಾ ರಿ ಮೆಡಿಕಲ್ ಕಾಲೇಜು ಆರಂಭಕ್ಕೆ ವಿವಿ ಕುಲಪತಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕರುನಾಡ ವಿಜಯಸೇನೆ ಕಾರ‌್ಯಕರ್ತರು ಬುಧವಾರ ಬುಧವಾರ ಪ್ರತಿಭಟಿಸಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ತರಗತಿ ಆರಂಭಿಸಲು ಎನ್‌ಎಂಸಿ ಅನುಮತಿ ನೀಡಿದ್ದು,ವಿವಿ ಕಟ್ಟಡವನ್ನು ತಾತ್ಕಾಲಿಕವಾಗಿ ಕಾಲೇಜಿಗೆ ಅಗ ತ್ಯವಿದೆ. ಕಳೆದ ಫೆಬ್ರವರಿ 2 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿ ಕಟ್ಟಡ ಜ್ಞಾನಗಂಗೋತ್ರಿಯನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಆದೇಶಿಸಿದ್ದಾರೆಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ಆದ್ದರಿಂದ ಕಾಲೇಜು ಪ್ರಾರಂಭಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ವೀಣಾಗೌರಣ್ಣ,ಜಗದೀಶ್,ರತ್ನಮ್ಮ,ರವಿಕಳ್ಳಿರೊಪ್ಪ,ಅವಿನಾಶ್,ನಾಗರಾಜ್ ಮುತ್ತು,ಅಖಿ ಲೇಶ್,ಆರ್.ಪ್ರದೀಪ್,ಮೆಹ್ತಾ ಫರ್ಜಾನ,ಕಮಲ,ಮಣಿಕಂಠ ಮತ್ತಿತರರು ಪ್ರತಿಭಟನೆಯಲ್ಲಿದ್ದರು.