ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ನೂತನವಾಗಿ ಪ್ರೇರಣಿ (ಪೀಡಿಯಾಟ್ರಿಕ್ ರಿಸಸಿಟೇಶನ್ ಎಂಡ್ ಎಮರ್ಜನ್ಸಿ ರಿಸರ್ಚ ನೆಟ್ವರ್ಕ್ ಇಂಡಿಯಾ) ಕಚೇರಿ ಹಾಗೂ ಸ್ಕಿಲ್ ಲ್ಯಾಬ್ ಆರಂಭಗೊ0ಡಿದೆ.
ಶನಿವಾರ ಲ್ಯಾಬ್ ಉದ್ಘಾಟಿಸಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಭಾರತದ ಚಿಕ್ಕಮಕ್ಕಳ ಪುನಃಶ್ಚೇತನ ಮತ್ತು ತುರ್ತು ಸಂಶೋಧನಾ ನೆಟವರ್ಕ್ ಭಾರತದಲ್ಲಿ ರೂಪುಗೊಂಡ ರಾಷ್ಟಿçÃಯ ಮಕ್ಕಳ ತುರ್ತು ವೈದ್ಯಕೀಯ ಸಂಶೋಧನಾ ಜಾಲವಾಗಿದ್ದು, ಈ ಜಾಲವು ಭಾರತದಲ್ಲಿ ಮಕ್ಕಳ ತುರ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಯೋಗ ಮತ್ತು ಸಂಶೋಧನೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಎಂದರು.
ಇದೊಂದು ಅಂತಾರಾಷ್ಟಿçÃಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಽಸುವ ಸಂಶೋಧನಾ ನೋಂದಾಯಿತ ಸಂಸ್ಥೆಯಾಗಿದ್ದು, ಅಂತಾರಾಷ್ಟಿçÃಯ ಸಂಶೋಧನೆಯ ಸಂಘದ ಮಾರ್ಗದರ್ಶನದಲ್ಲಿ ಅಂತರಾಷ್ಟಿçÃಯ ಸಂಶೋಧಕ ಸಂಸ್ಥೆಗಳೊAದಿಗೆ ಇನ್ನೂ ಹೆಚ್ಚಿನ ಚಿಕ್ಕಮಕ್ಕಳ ತುರ್ತು ಸಮಸ್ಯೆಯ ಸಂಶೋಧನೆಯಲ್ಲಿ ಪಾಲ್ಗೊಂಡಿದೆ. ಮಕ್ಕಳಲ್ಲಿ ಕಂಡುಬರುವ ತೀವೃ ಆರೋಗ್ಯದ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಾಪಾಡುವಲ್ಲಿ ಸಹಾಯಕವಾಗಲಿದೆ. ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಸ್ಥಾಪಿಸಿದ ಈ ನೂತನ ಕಚೇರಿ ಹಾಗೂ ವೈದ್ಯಕೀಯ ತಂಡದ ಹೊಸ ಸಂಶೋಧನೆಗೆ ನೆರವಾಗಲಿದೆ ಎಂದು ತಿಳಿಸಿದರು.
ಬಿವಿವಿ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಇಂತಹ ಸಂಶೋಧನಾ ನೆಟವರ್ಕ್ ಸ್ಥಾಪಿಸಿದ್ದು, ನಿಜಕ್ಕೂ ಒಂದು ಹೊಸ ಮೈಲಿಗಲ್ಲು. ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ಮಟ್ಟದಲ್ಲಿ ಸಂಶೋಧನೆಗೆ ನಮ್ಮ ಆಸ್ಪತ್ರೆಯೂ ಕೈ ಜೋಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಶೋಧನೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಪ್ರೇರಣಿ ಮುಖ್ಯಸ್ಥೆ ಡಾ.ಜಯಶ್ರೀ ಮತ್ತು ಡಾ.ಇಂದುಮತಿ ಸಂತಾನA ಅವರು ಕೇಂದ್ರದ ಕಾರ್ಯಗಳನ್ನು ವಿವರಿಸಿದರು. ಪ್ರೇರಣಿ ಜಾಲ ಸ್ಥಾಪಿಸಿದ ಬಾಗಲಕೋಟೆಯ ಎಸ್.ಎನ್. ಮಡಿಕಲ್ ಕಾಲೇಜು, ವಿಜಯಪುರದ ಬಿಎಲ್‌ಡಿಇ, ರಾಯಚೂರಿನ ನವೋದಯ, ಚಂಡೀಗಢದ ಪಿ.ಜಿ.ಐ ಹಾಗೂ ಚೆನೈನ ಮೆಹೆತಾ ಚಿಲ್ಡçನ್ ಇನ್ಸಟ್ಯೂಟ್ ಕಾಲೇಜುಗಳ ಸಂಶೋಧನೆಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷಕರಾದ ಡಾ.ಶ್ರೀರಾಮ ಕೋರಾ, ಸ್ಥಳೀಯ ಚಿಕ್ಕಮಕ್ಕಳ ವೈದ್ಯ ಡಾ. ಆರ್.ಟಿ.ಪಾಟೀಲ, ಪ್ರಸೂತಿ ಮತ್ತು ಚಿಕ್ಕಮಕ್ಕಳ ವಿಭಾಗದ ತಜ್ಞ ವೈದ್ಯರೊಂದಿಗೆ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.