ಜಿಲ್ಲೆ

ಮೆಚ್ಚುಗೆ ಗಳಿಸಿದ ಆಮೆ ಕತೆ ನಾಟಕ

ಹುಣಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ಮುಳ್ಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಮೆ ಕಥೆ ನಾಟಕವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಮಂಗಳವಾರ ಮೈಸೂರಿನ ರಾಮಗೋವಿಂದ ರಂಗಮಂದಿರ ವೇದಿಕೆಯಲ್ಲಿ ಬಾ ಸೃಷ್ಟಿ ತಂಡ ಪ್ರಸ್ತುತಪಡಿಸಿದ ಆಮೆ ಕಥೆ ನಾಟಕವನ್ನು ಮಕ್ಕಳು ಅಚ್ಚುಕಟ್ಟಾಗಿ ಪ್ರದರ್ಶಿಸಿದರು.

ಪರಿಸರ ಮಾಲಿನ್ಯ ಅದರಲ್ಲೂ ಮುಖ್ಯವಾಗಿ ಜಲಮಾಲಿನ್ಯದಿಂದಾಗುವ ಅನಾಹುತಗಳ ಕುರಿತು ನೋಡುಗರ ಕಣ್ಣಿಗೆ ಕಟ್ಟುವಂತೆ ಸಂಭಾಷಣೆ, ಅಭಿನಯದ ಮೂಲಕ ವಿದ್ಯಾರ್ಥಿಗಳು ನಟಿಸಿದರು. ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳು ನದಿಯ ಒಡಲನ್ನು ಸೇರುವ ಮೂಲಕ ಜಲಚರಿಗಳ ಜೀವಗಳು ಉಸಿರುಗಟ್ಟುತ್ತಿರುವ ಕುರಿತು ಮನೋಜ್ಞವಾಗಿ ಅಭಿನಯಿಸಿ ಅನಾಹುತಗಳ ತಡೆಗೆ ನಾಗರಿಕ ಸಮಾಜ ಏನು ಮಾಡಬೇಕೆನ್ನವುದನ್ನು ತಿಳಿಸಿದರು.

ಆಮೆಕಥೆ ನಾಟಕದ ರಚನಕಾರ ಐ.ಕೆ.ಬೊಳುವಾರು, ನಿರ್ದೇಶನ ಗೀತಾ ಮೋಹಿತೆ, ಸಹ ನಿರ್ದೇಶನ ಚೇತನ್ ಜಗತಾಪ್, ಸಂಗೀತ ಅನುಶ್ ಶೆಟ್ಟಿ ನಿರ್ವಹಿಸಿದ್ದರು. ನಾಟಕದಲ್ಲಿ ವಿದ್ಯಾರ್ಥಿಗಳಾದ ಮೇಘ ಬಾಯಿ, ಶರ್ಮಿಳಾ, ಚೈತ್ರಾ, ಕುಸುಮಾ, ಎಂ.ಎಸ್.ಪೂರ್ವಜ್, ಚೈತ್ರಾ, ಸಗನ್, ಎಂ.ಎಸ್.ಮಾನಸ, ಸಾನ್ವಿ, ಡಿಂಪಲ್ ಲಕ್ಷ್ಮೀ, ಧನುಷ್, ಲಕ್ಷ್ಮಣ ರಾವ್ ನಿಂಬಲ್ಕರ್, ರಾಹುಲ್ ರಾವ್ ನಿಂಬಾಲ್ಕರ್, ದಿವ್ಯಾ ಮತ್ತು ರೋಹಿತ್ ರಾವ್ ಜಗತಾಪ್ ಪಾತ್ರಧಾರಿಗಳಾಗಿದ್ದರು.