ಶಿಕಾರಿಪುರ: ಕಳೆದ ಒಂದು ವಾರದಿಂದ ಜಿಟಿ ಜಿಟಿ ಮಳೆ ಹಿಡಿದಿದೆ. ರೈತರು ಮೆಕ್ಕೆಜೋಳಕ್ಕೆ ಮೊದಲ ಹಂತವಾಗಿ ಯೂರಿಯಾ ಗೊಬ್ಬರ ಕೊಡá-ವುದು ಸರ್ವೆ ಸಾಮಾನ್ಯ, ಆದರೆ ಈ ವರ್ಷ ಯೂರಿಯಾ ಬಳಕೆ ಕಳೆದ ವರ್ಷಕ್ಕಿಂತ ಎರಡರಷ್ಟು ಜಾಸ್ತಿಯಾಗಿದೆ!
ಕಳೆದ ವರ್ಷ 2,950 ಟನ್ ಯೂರಿಯಾ ಮೊದಲ ಹಂತದ ಬಳಕೆಯಾಗಿದ್ದರೆ ಈ ವರ್ಷ ಈಗಾಗಲೇ 4,500 ಟನ್ಗಿಂತಲೂ ಜಾಸ್ತಿಯಾಗಿದೆ. ಅತಿಯಾದ ಯೂರಿಯಾ ಬಳಕೆ ಅಪಾಯಕಾರಿ ಎಂದು ಕೃಷಿ ಇಲಾಖೆ ಎಚ್ಚರಿಸಿದೆ.
ತಾಲೂಕಿನ 19,000 ಎಕರೆ ಖಾತೆ ಪ್ರದೇಶದಲ್ಲಿ ಮತ್ತು 6,000 ಎಕರೆ ಬಗರ್ಹುಕುಂ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದು ಬೆಳೆ ಹುಲುಸಾಗಿ ಬರಬೇಕೆಂದು ರೈತರು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ಬಳಸುತ್ತಿದ್ದಾರೆ. ಆದರೆ ಈ ವರ್ಷ ಅಳತೆ ಮೀರಿ ಯೂರಿಯಾ ಬಳಸುತ್ತಿರುವುದು ಕಂಡುಬಂದಿದೆ.
ಯೂರಿಯಾ ಬಳಕೆಯನ್ನು ನಿಲ್ಲಿಸಬೇಕು. ಇಲಾಖೆಯ ಸಲಹೆ ಪಡೆದು ಅದರ ಜತೆಗೆ ಇತರೆ ಪೋಷಕಾಂಶ ಹಾಕಬೇಕು. ಜಾಸ್ತಿ ಯೂರಿಯಾ ಗೊಬ್ಬರದ ಬಳಕೆಯಿಂದ ಬೆಳೆ ಹಚ್ಚ ಹಸಿರಾಗಿ ಹುಲುಸಾಗಿ ಬರುವುದರಿಂದ ಗೊಣ್ಣೆ ಹುಳು ಮತ್ತು ಇತರೆ ಹುಳುಗಳ ಭಾದೆ ಜಾಸ್ತಿಯಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಕಿರಣ್ಕುಮಾರ್ ಎಚ್ಚರಿಸಿದ್ದಾರೆ.
ತಾಲೂಕಿನಲ್ಲಿ ಮತ್ತೆ ಗೊಣ್ಣೆ ಹುಳುವಿನ ಬಾಧೆ ಪ್ರಾರಂಭವಾಗಿದೆ. ಅಂದಾಜು 5,000 ಹೆಕ್ಟೇರ್ ಪ್ರದೇಶದಲ್ಲಿ ಈ ಬಾಧೆ ಕಾಣಸಿಕೊಂಡಿದ್ದು ರೈತರಿಗೆ ಹಾನಿಯಾಗಿದೆ. ಈ ಹುಳುಗಳ ಸಮಸ್ಯೆ ಮಿತಿ ಮೀರಿದರೆ ತಕ್ಷಣ ಹತೋಟಿಗೆ ಬರುವುದಿಲ್ಲ. ಹಿಂದೆಯೂ ಗೊಣ್ಣೆ ಹುಳು ರೈತರನ್ನು ಬಿಡದಂತೆ ಕಾಡಿದೆ. ಈ ನಿಟ್ಟಿನಲಿ ್ಲವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಹನುಮಂತ ಸ್ವಾಮಿ ನೇತೃತ್ವದಲ್ಲಿ ಇತ್ತೀಚೆಗೆ ತಾಲೂಕಿನ ಚನ್ನಳ್ಳಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಲಹೆ ಸೂಚನೆ ನೀಡಿದ್ದಾರೆ.
ರೈತರು ಮೊದಲ ಹಂತವಾಗಿ ಜಾಸ್ತಿ ಯೂರಿಯಾ ಗೊಬ್ಬರ ಬಳಸಲೇಬೇಕಾಗಿದೆ. ಕಾರಣ ಬೆಳೆ ಚೆನ್ನಾಗಿ ಬರಬೇಕು. ಎರಡನೇಯದಾಗಿ ಗೊಬ್ಬರದ ಗುಣಮಟ್ಟ ಸರಿಯಾಗಿರದ ಕಾರಣ ಜಾಸ್ತಿ ಹಾಕಬೇಕು, ಮೊದಲು 50 ಕೆಜಿ ಬ್ಯಾಗ್ ಬರುತ್ತಿತ್ತು. ಆದರೆ ಈಗ 45 ಕೆಜಿ ಬ್ಯಾಗ್ ಗೊಬ್ಬರ ಬರುತ್ತಿದೆ. ಆದ್ದರಿಂದ ರೈತರು ಹೆಚ್ಚು ಯೂರಿಯಾ ಬಳಸುತ್ತಿದ್ದಾರೆ.
| ಡಿ.ಎಸ್.ಈಶ್ವರಪ್ಪ, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ