ಕಡೂರು ಕೋಟೆ ಶ್ರೀರಾಯರ ಮತ್ತಿಕಾ ವೃಂದಾವನದಲ್ಲಿ ಉಡುಪಿ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಪೂಜೆ ಸಲ್ಲಿಸಿದರು. 
ಜಿಲ್ಲೆ

ಮೃತ್ತಿಕಾ ವೃಂದಾವನದಲ್ಲಿ ವಿಶೇಷ ಪೂಜೆ

ಕಡೂರು: ಮೋಕ್ಷವನ್ನು ತೊರೆದ ಪ್ರಹ್ಲಾದರಾಜರು ಮನುಕುಲದ ಭಕ್ತಕೋಟಿ ಉದ್ದಾರಕ್ಕಾಗಿಯೇ ರಾಘವೇಂದ್ರ ಸ್ವಾಮಿಗಳ ಅವತಾರದಲ್ಲಿ ಭಕ್ತಸಮೂಹಕ್ಕೆ ಇಂದಿಗೂ ಅನುಗ್ರಹಿಸುತ್ತಿದ್ದಾರೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮತ್ತಿಕಾ ವೃಂದಾವನ ಪ್ರತಿಷ್ಠಾಪನೆಯ 93ನೇ ವಾರ್ಷಿಕೋತ್ಸವ ಅಂಗವಾಗಿ ಮಂಗಳವಾರ ಶ್ರೀರಾಯರ ಮತ್ತಿಕಾ ವೃಂದಾವನಕ್ಕೆ ವಿಶೇಷ ಲ, ಪಂಚಾಮತ ಅಭಿಷೇಕ ನೆರವೇರಿಸಿ ಆರ್ಶೀವಚನ ನೀಡಿ, ಇಲ್ಲಿನ ಕೋಟೆ ರಾಯರ ಮಠ ಇತಿಹಾಸ ಹೊಂದಿದೆ. ಇಂದಿಗೂ ವಿಶೇಷ ಆಚರಣಾ ಮಹೋತ್ಸವಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಭಕ್ತರ ಅಭಿಲಾಷೆಗೆ ತಕ್ಕಂತೆ ಧಾರ್ಮಿಕ ಮಹೋತ್ಸವಗಳು ಆಯೋಜನೆಗೊಳ್ಳುತ್ತಿರುವುದು ಶ್ಲಾಘನೀಯ. ಶತಮಾನೋತ್ಸವ ಸಮೀಪಿಸುತ್ತಿರುವುದು ಮಠದ ಪರಂಪರೆ ಕೀರ್ತಿ ಹೆಚ್ಚಿಸಿದೆ ಎಂದರು.

ಬೆಳಗ್ಗೆ ಶ್ರೀರಾಯರ ಬಂದಾವನಕ್ಕೆ ವಿಶೇಷ ಸಂಕಲ್ಪ ಪೂಜೆ ನೆರವೇರಿಸಿ ಬೆಳ್ಳಿಕವಚ ಸಮರ್ಪಣೆಯೊಂದಿಗೆ ಹೂವಿನ ಅಲಂಕಾರ ನೆರವೇರಿಸಲಾಯಿತು. ಭಕ್ತರ ಮನೆಗಳಲ್ಲಿ ಉಡುಪಿಯ ಕಾಣಿಯೂರು ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಸಂಜೆ ಭಜನೆ ಮಹೋತ್ಸವ ಹಾಗೂ ಪ್ರಹ್ಲಾದರಾಜರ ಉತ್ಸವಮೂರ್ತಿಯೊಂದಿಗೆ ಮಠದ ಆವರಣದಲ್ಲಿ ಉತ್ಸವ ನಡೆಯಿತು. ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಸಮಿತಿ ಅಧ್ಯಕ್ಷ ಎಚ್.ಜೆ. ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಟಿ.ಆರ್.ಮನು, ಟಿ.ಆರ್. ಪವನ್‌ಕುಮಾರ್, ಎಚ್.ಎನ್.ಶ್ರೀನಿವಾಸ್ ಮತ್ತಿತರರಿದ್ದರು.