ಜಿಲ್ಲೆ

ಮೃತ ಪೊಲೀಸ್​ಗೆ ರು.೭೦ ಲ

ಕಲಬುರಗಿ: ನಗರದ ನಗರ ಸಶಸ್ತ್ರ ಪೊಲೀಸ್​ ಪಡೆಯಲ್ಲಿ (ಸಿಎಆರ್​) ಟಕದಲ್ಲಿ ರ‍್ತವ್ಯ ನರ‍್ವಹಿಸುತ್ತಿದ್ದ ಪೇದೆ ಶಿವಕಾಂತ ತಿಮ್ಮಣ್ಣ ಅವರು ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ೭೦ ಲ ರೂ. ಪರಿಹಾರದ ಚೆಕ್​ನ್ನು ಕುಟುಂಬಸ್ಥರಿಗೆ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ಹಸ್ತಾಂತರಿಸಿದರು.

ನಗರದ ಸಿಎಆರ್​ ಟಕದಲ್ಲಿ ರ‍್ತವ್ಯ ನರ‍್ವಹಿಸುತ್ತಿದ್ದ ಶಿವಕಾಂತ ೨೦೨೪ ಡಿ.೧೦ರಂದು ಸ್ನೇಹಿತನ ಮದುವೆ ಮುಗಿಸಿ, ವಾಪಸ್​ ಬರುವಾಗ ಕಾರು ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಿಧನ ಹೊಂದಿದ್ದರು.

ಕೊಪ್ಪಳ್ಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಗಿ ಗ್ರಾಮದ ಶಿವಕಾಂತ ೨೦೨೧ರಲ್ಲಿ ನೇಮಕವಾಗಿದ್ದ, ಕುಟುಂಬಕ್ಕೆ ಆಶ್ರಯವಾಗಿದ್ದ ಪುತ್ರನನ್ನು ಕಳೆದುಕೊಂಡು, ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.

ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಅವರು ಕುಟುಂಬಕ್ಕೆ ನೆರವು ದೊರೆಯುವ ನಿಟ್ಟಿನಲ್ಲಿ ಶಿವಕಾಂತ ಅವರ ಎಲ್ಲ ಮಾಹಿತಿ ಸಂಗ್ರಹಿಸಿ, ಅವರ ಬ್ಯಾಂಕ್​ ಖಾತೆಗಳನ್ನು ಪರಿಶೀಲಿಸಿ, ಬರೋಡಾ ಬ್ಯಾಂಕ್​ನಲ್ಲಿ ಮೃತಪಡುವ ಎರಡು ತಿಂಗಳ ಹಿಂದೆ ಬರೋಡಾ ಬ್ಯಾಂಕ್​ನಲ್ಲಿ ಪೊಲೀಸ್​ ಸ್ಯಾಲರಿ ಪ್ಯಾಕೇಜ್​ ಮಾಡಿಕೊಂಡಿದ್ದು, ಮಾಹಿತಿ ಪಡೆದು, ಬ್ಯಾಂಕ್​ ಅಧಿಕಾರಿಗಳ ಜತೆ ನಿರಂತರ ಸಂರ‍್ಕ ಸಾಧಿಸಿ, ನೆರವು ಕೊಡಿಸಿ, ಮಾನವೀಯತೆ ಮೆರೆದಿದ್ದಾರೆ.

ನಗರದ ಕಮೀಷನರ್​ ಕಚೇರಿಯಲ್ಲಿ ಗುರುವಾರ ಶಿವಕಾಂತ ತಾಯಿ ಮತ್ತು ಕುಟುಂಬಸ್ಥರಿಗೆ ೭೦ ಲ ರೂ. ಚೆಕ್​ನ್ನು ಕಮೀಷನರ್​ ಡಾ.ಶರಣಪ್ಪ ಎಸ್​.ಡಿ. ಮತ್ತು ಬ್ಯಾಂಕ್​ ಆ್​ ಬರೋಡಾದ ಅಧಿಕಾರಿಗಳು ಹಸ್ತಾಂತರಿಸಿದರು. ಡಿಸಿಪಿ ಕನ್ನಿಕಾ ಸಿಕ್ರಿವಾಲ್​, ಬ್ಯಾಂಕ್​ ಅಧಿಕಾರಿಗಳು ಉಪಸ್ಥಿತರಿದ್ದರು.