ಕರೊನಾದಿಂದ ಇತ್ತೀಚೆಗೆ ಮೃತಪಟ್ಟ ಪತ್ರಕರ್ತ ಸಂಜೀವಕುಮಾರ ನಾಡಿಗೇರ ಅವರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ನೆರವು ನೀಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಇತರರಿದ್ದರು. 
ಜಿಲ್ಲೆ

ಮೃತ ಪತ್ರಕರ್ತನ ಕುಟುಂಬಕ್ಕೆ 1 ಲಕ್ಷ ರೂ. ನೆರವು

ಬೆಳಗಾವಿ: ಕರೊನಾದಿಂದ ಇತ್ತೀಚೆಗೆ ಮೃತಪಟ್ಟ ಪತ್ರಕರ್ತ ಸಂಜೀವಕುಮಾರ ನಾಡಿಗೇರ ಕುಟುಂಬಕ್ಕೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವೈಯಕ್ತಿಕವಾಗಿ ಗುರುವಾರ 1 ಲಕ್ಷ ರೂ. ನೆರವು ನೀಡಿದರು.

ಮೃತ ಪತ್ರಕರ್ತನ ಪತ್ನಿ ಸಂಗೀತಾ, ಪುತ್ರರಾದ ವಿನಾಯಕ, ಪ್ರವೀಣ ಅವರಿಗೆ ಧನ ಸಹಾಯ ನೀಡಿದ ಸಚಿವರು, ವಿಧವಾ ವೇತನ ಸೇರಿದಂತೆ ಸರ್ಕಾರದ ಇತರ ಯೋಜನೆಗಳನ್ನು ಈ ಕುಟುಂಬಕ್ಕೆ ನೀಡಲು ಕ್ರಮಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಆರ್‌ಸಿ ಆದಿತ್ಯ ಆಮ್ಲಾನ್ ಬಿಸ್ವಾಸ್, ಎಡಿಸಿ ಅಶೋಕ ದುಡಗುಂಟಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಆರೋಗ್ಯ ಇಲಾಖೆ ಅಧಿಕಾರಿಗಳು, ಪತ್ರಕರ್ತ ಮೆಹಬೂಬ ಮಕಾಂದಾರ ಇತರರು ಇದ್ದರು.

ಮನವಿಗೆ ಸ್ಪಂದನೆ

20 ವರ್ಷಗಳಿಂದ ವಿವಿಧ ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಪತ್ರಕರ್ತ ಸಂಜೀವಕುಮಾರ ಅವರಿಗೆ ಕರೊನಾ ಸೋಂಕು ತಗುಲಿ, ಬಿಮ್ಸ್ಗೆ
ದಾಖಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಪತ್ರಕರ್ತರು ಇತ್ತೀಚೆಗೆ ಮನವಿ ನೀಡಿದ್ದರು. ಮನವಿಗೆ ಸ್ಪಂದಿಸಿದ ಕಾರಜೋಳ ವೈಯಕ್ತಿಕವಾಗಿ ದಿ. ಸಂಜೀವಕುಮಾರ ನಾಡಿಗೇರ ಅವರ ಕುಟುಂಬಕ್ಕೆ 1 ಲಕ್ಷ ರೂ. ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.